ಹಾಸನ: ಹೆಣ್ಣು ಮಗು ಎಂಬ ಕಾರಣಕ್ಕೆ ಆಗಷ್ಟೇ ಜನಿಸಿದ ನವಜಾತ ಶಿಶುವನ್ನು ರಾಜಕಾಲುವೆಯಲ್ಲಿ ಬಿಸಾಡಿ ಹೋಗಿರುವ ಘಟನೆ ಕುವೆಂಪು ನಗರದಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ಕೊಳಚೆ ನೀರಿನಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಹಿನ್ನಲೆ ಸ್ಥಳೀಯರು ಸಮೀಪದ ಕೆ.ಆರ್.ಪುರಂ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿ ಪೊಲೀಸರು ಪರಿಶೀಲಿಸಿದಾಗ ಹೆಣ್ಣು ಶಿಶುವಿನ ಶವವೆಂದು ಗೊತ್ತಾಗಿದೆ.

ನವಜಾತ ಶಿಶುವಿನ ಮೃತದೇಹದಲ್ಲಿ ಕರುಳ ಬಳ್ಳಿಯಿರುವುದರಿಂದ ಹುಟ್ಟಿದ ತಕ್ಷಣ ತಂದು ಬಿಸಾಡಿ ಹೋಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕೃತ್ಯ ಎಸಗಿರುವವರನ್ನು ಪತ್ತೆ ಹಚ್ಚಲು ತನಿಖೆ ಕೈಗೊಂಡಿದ್ದಾರೆ.
