ಬೆಂಗಳೂರು, ಜುಲೈ 1: ಕರ್ನಾಟಕದ ಗಡಿ ಹಾಗೂ ನದಿ ಸಂಬಂಧಿತ ವಿವಾದಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹೆಚ್.ಕೆ. ಪಾಟೀಲ್ ಅವರನ್ನು ಗಡಿ ಉಸ್ತುವಾರಿ ಸಚಿವರಾಗಿ ನೇಮಕ ಮಾಡುವ ಆದೇಶ ಹೊರಡಿಸಿದೆ.
ಈ ಬಗ್ಗೆ ಸರ್ಕಾರದಿಂದ ಇಂದು ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಮಾನ್ಯ ಕಾನೂನು, ನ್ಯಾಯ ಶಾಸನ ರಚನೆ, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಖಾತೆ ನಿರ್ವಹಿಸುತ್ತಿರುವ ಪಾಟೀಲ್ ಅವರಿಗೇ ಈ ಮಹತ್ವದ ಹೊಣೆಗಾರಿಕೆ ವಹಿಸಲಾಗಿದೆ.

ರಾಜ್ಯ ಸರಹದ್ದು ಪ್ರದೇಶಗಳಲ್ಲಿ ಉಂಟಾಗುತ್ತಿರುವ ವಿವಾದಗಳು, ರಾಜಕೀಯ ಮತ್ತು ಕಾನೂನಾತ್ಮಕ ಹಸ್ತಕ್ಷೇಪಕ್ಕೆ ಒಳಪಟ್ಟಿದ್ದು, ಅವುಗಳಿಗೆ ಸೂಕ್ತ ನಿರ್ವಹಣೆ ಅಗತ್ಯವಾಗಿದೆ. ಗಡಿ ಹಾಗೂ ನದಿಗಳ ಸಮಸ್ಯೆಗಳ ಬಗ್ಗೆ ಸಮಯೋಚಿತ ಕ್ರಮ ಕೈಗೊಳ್ಳಲು ಈ ನೇಮಕ ನೆರವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನು ಓದಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಇನ್ಮುಂದೆ ‘ಬೆಂಗಳೂರು ಉತ್ತರ ಜಿಲ್ಲೆ’? ಹೆಸರು ಬದಲಾವಣೆ ಕುರಿತು ನಾಳೆ ಸಂಪುಟ ತೀರ್ಮಾನ ಸಾಧ್ಯತೆ
ಈ ಆದೇಶವು ತಕ್ಷಣದಿಂದ ಜಾರಿಗೆ ಬರುವಂತಿದ್ದು, ಮುಂದಿನ ಆದೇಶ ಹೊರಡುವವರೆಗೆ ಜಾರಿಯಲ್ಲಿರುತ್ತದೆ.
