ಮಾರಣಾಂತಿಕ ಗಂಭೀರ ಖಾಯಿಲೆಯಿಂದ ಬಳಲುತ್ತಿರುವವರಿಗೆ ದಯಾಮರಣಕ್ಕೆ ಅವಕಾಶ ನೀಡಿದ ರಾಜ್ಯ ಸರ್ಕಾರ
ಬೆಂಗಳೂರು: ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದ್ದು, ಇಂದಿನಿಂದ (ಅಕ್ಟೋಬರ್ 01, 2025) ಪ್ರಸ್ತುತ ಜಾರಿಯಲ್ಲಿದ್ದ ಜ್ಯೋತಿ ಸಂಜೀವಿನಿ ಯೋಜನೆ ಸ್ಥಗಿತಗೊಂಡಿದೆ. ಅದರ ಬದಲಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಜಾರಿಗೊಂಡಿದೆ.
ಈ ಕುರಿತು ಹೊರಡಿಸಿದ ಸರ್ಕಾರಿ ಆದೇಶದಲ್ಲಿ, ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರಿಗೆ KASS ಯೋಜನೆಯಡಿ ನಗದುರಹಿತ ಚಿಕಿತ್ಸೆ ಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಇದನ್ನು ಓದಿ: ಬೇಲೂರಿನಲ್ಲಿ ಗಣೇಶನಿಗೆ ಅವಮಾನ 🚨
🔹 ಸರ್ಕಾರದ ಸೂಚನೆಗಳು
- ಈಗಾಗಲೇ ಒಡಂಬಡಿಕೆ ಮಾಡಿಕೊಂಡಿರುವ ನೊಂದಾಯಿತ ಆಸ್ಪತ್ರೆಗಳು, KASS ಫಲಾನುಭವಿಗಳಿಗೆ ನಗದುರಹಿತ ಚಿಕಿತ್ಸೆಯನ್ನು ನೀಡಬೇಕು.
- ತುರ್ತು ಪರಿಸ್ಥಿತಿಯಲ್ಲಿ, ಫಲಾನುಭವಿಗಳು 48 ಗಂಟೆಗಳೊಳಗಾಗಿ ನೊಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ.
- ಯೋಜನೆಯಡಿ ಸುಮಾರು 2000 ಚಿಕಿತ್ಸೆ ವಿಧಾನಗಳು ನಿಗದಿಪಡಿಸಲ್ಪಟ್ಟಿವೆ.
- NABH ಹಾಗೂ JCI ಮಾನ್ಯತೆ ಪಡೆದ ಆಸ್ಪತ್ರೆಗಳಿಗೆ ಶೇ.15ರಷ್ಟು ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುವುದು.
- ಪ್ಯಾಕೇಜ್ನಲ್ಲಿ ಒಳಪಡದ ಚಿಕಿತ್ಸೆಗಳಿಗೂ ಪೂರ್ವಾನುಮತಿಯೊಂದಿಗೆ ಅವಕಾಶ ಕಲ್ಪಿಸಲಾಗಿದೆ.
- KASS ಫಲಾನುಭವಿಗಳಿಗೆ ಯಾವುದೇ ರೆಫರಲ್ ಪತ್ರದ ಅವಶ್ಯಕತೆ ಇಲ್ಲ; ಪ್ಯಾಕೇಜ್ ದರದ ಮೇಲೆ ಹೊರಮಿತಿಯೂ ಇರದು.
- ಯೋಜನೆಗೆ ಒಳಪಡುವುದಿಲ್ಲದ ಸರ್ಕಾರಿ ನೌಕರರಿಗೆ, ವೈದ್ಯಕೀಯ ವೆಚ್ಚ ಮರುಪಾವತಿ ನಿಯಮವು ಮುಂದಿನ ಆರು ತಿಂಗಳು ಪ್ರಸ್ತುತ ನಿಯಮಗಳ ಪ್ರಕಾರ ಮುಂದುವರಿಯುತ್ತದೆಇದನ್ನು ಓದಿ:
🔹 ಜ್ಯೋತಿ ಸಂಜೀವಿನಿ ಯೋಜನೆ ಸ್ಥಗಿತ
ಸರ್ಕಾರದ ತಾಜಾ ಆದೇಶದ ಪ್ರಕಾರ, ಇಂದಿನಿಂದ ಜ್ಯೋತಿ ಸಂಜೀವಿನಿ ಯೋಜನೆಯಡಿಯಲ್ಲಿ ಹೊಸ ದಾಖಲೆಗಳನ್ನು ನೊಂದಾಯಿಸಿಕೊಳ್ಳಲು ಅವಕಾಶವಿಲ್ಲ. ಈಗಾಗಲೇ ದಾಖಲಾದ ಫಲಾನುಭವಿಗಳಿಗೆ ಮಾತ್ರ ಚಿಕಿತ್ಸೆಯನ್ನು ಪೂರ್ಣಗೊಳಿಸಲಾಗುವುದು.
ಇದನ್ನು ಓದಿ: ಸರ್ಕಾರಿ ನೌಕರರಿಗೆ ಸಿಎಂ ಸಿದ್ದರಾಮಯ್ಯರಿಂದ ತುಟ್ಟಿಭತ್ಯೆ ಘೋಷಣೆ
👉 ಹೀಗಾಗಿ, ರಾಜ್ಯದ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳು ಇಂದಿನಿಂದ KASS ಯೋಜನೆಯಡಿ ವೈದ್ಯಕೀಯ ಸೇವೆಗಳನ್ನು ಪಡೆಯಲಿದ್ದಾರೆ.




[…] […]