ಬೆಂಗಳೂರು: ಕಬ್ಬು ಬೆಳೆಗಾರರ ಪ್ರತಿಭಟನೆಯ ಹಿನ್ನೆಲೆ ರಾಜ್ಯ ಸರ್ಕಾರವು ಪ್ರತಿ ಟನ್ ಕಬ್ಬಿಗೆ ₹3,200 ನೀಡಲು ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ರೈತರು ₹3,500 ಪ್ರತಿ ಟನ್ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಸರ್ಕಾರವು ₹3,200 ನೀಡಲು ನಿರ್ಧರಿಸಿದೆ.
👉 11.25 ರಿಕವರಿ ಬಂದರೆ ₹3,500,
👉 10.25 ರಿಕವರಿ ಬಂದರೆ ₹3,100, ಪ್ರತಿ ಟನ್ಗೆ ನೀಡಲಾಗುತ್ತದೆ,” ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಬ್ಬು ಬೆಲೆ ಹಾಗೂ ರೈತರ ಪ್ರತಿಭಟನೆ ಕುರಿತು ಸಭೆ ನಡೆಸಿದ್ದು, ಬೆಳಗಾವಿ, ಬಾಗಲಕೋಟೆ, ಬಿಜಾಪುರ ಪ್ರದೇಶಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಸಂಪೂರ್ಣ ಚರ್ಚೆ ನಡೆದಿದೆ ಎಂದು ಹೇಳಿದರು.
ಅವರು ಸಚಿವರು ಹೆಚ್.ಕೆ ಪಾಟೀಲ್ ಮತ್ತು ಎಂ.ಬಿ ಪಾಟೀಲ್ ರೈತರೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿ, “ನಮ್ಮ ಸರ್ಕಾರ ಯಾವತ್ತೂ ರೈತರ ಪರವಾಗಿದೆ,” ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿ: ರೈತ ಬಂಧುಗಳಿಗೆ ಸರ್ಕಾರದಿಂದ ಸಂತಸದ ಸುದ್ದಿ – ಕೇವಲ ₹1,781ಕ್ಕೆ ಪವರ್ ಸ್ಪ್ರೇಯರ್ ಸಹಾಯಧನ ಯೋಜನೆ
ಸಿಎಂ ಅವರು ಮುಂದುವರೆದು, “ಎಫ್ಆರ್ಪಿ ದರವನ್ನು ನಿಗದಿ ಪಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಈ ವರ್ಷ ಮೇ 6ರಂದು 2025–26ರ ಸಾಲಿಗೆ ₹3,550 ಪ್ರತಿ ಟನ್ ಎಫ್ಆರ್ಪಿ ನಿಗದಿ ಮಾಡಲಾಗಿದೆ. ಆದರೆ ಕೇಂದ್ರ ಸರ್ಕಾರ ಸಕ್ಕರೆ ಬೆಲೆ ಹಾಗೂ ರಫ್ತು ನಿಯಂತ್ರಣದ ವಿಷಯಗಳಲ್ಲಿ ಯಾವುದೇ ಸ್ಪಷ್ಟ ನೀತಿಯನ್ನು ಪ್ರಕಟಿಸಿಲ್ಲ,” ಎಂದು ಟೀಕಿಸಿದರು.
ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ಸಭೆಯನ್ನು ನಾಳೆ ಬೆಂಗಳೂರಿನಲ್ಲಿ ಕರೆಯಲಾಗಿದ್ದು, ಸಿಎಂ ಅವರು ಪ್ರಧಾನ ಮಂತ್ರಿಯವರಿಗೂ ಪತ್ರ ಬರೆದು ಭೇಟಿಗಾಗಿ ವಿನಂತಿ ಸಲ್ಲಿಸುವುದಾಗಿ ಘೋಷಿಸಿದರು.
