ಬೆಂಗಳೂರು, ಜೂನ್ 18: ಮೌಲ್ಯಮಾಪನ, ಯೋಜನೆ, ಮತ್ತು ಆಡಳಿತ ಸಂಬಂಧಿತ ನಿರ್ಣಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಡೆಯಲಿರುವ 2025ನೇ ಸಾಲಿನ 13ನೇ ಸಚಿವ ಸಂಪುಟ ಸಭೆಯ ಸ್ಥಳದಲ್ಲಿ ಬದಲಾವಣೆ ನಡೆದಿದೆ. ಜೂನ್ 19, ಗುರುವಾರ ಮಧ್ಯಾಹ್ನ 12 ಗಂಟೆಗೆ ದಲ್ಲಿ ನಡೆಸಲಾಗುತ್ತದೆ ಎಂದು ಸರ್ಕಾರದಿಂದ ತಿಳಿಸಲಾಗಿದೆ.
ಸಭೆಯ ಕಾರ್ಯಸೂಚಿಯನ್ನು ಪ್ರತ್ಯೇಕವಾಗಿ ಕಳುಹಿಸಲಾಗುವುದು ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.

ಸಚಿವ ಸಂಪುಟಕ್ಕೆ ರೈತರ ಮುತ್ತಿಗೆ ಹಾಕುವ ಸಂಭವವಿರುವ ಶಂಕೆ:-
ಸ್ಥಳ ಬದಲಾವಣೆಗೆ ದೇವನಹಳ್ಳಿ ಸುತ್ತಮುತ್ತಲಿನ ರೈತ ಹೋರಾಟವೇ ಕಾರಣವೆಂಬ ಊಹಾಪೋಹ ಉಂಟಾಗಿದೆ. ಕೈಗಾರಿಕೀಕರಣದ ನೆಪದಲ್ಲಿ ಸಾಗುವಳಿ ಭೂಮಿ ಕಬಳಿಕೆಗೆ ಸರ್ಕಾರ ಮುಂದಾಗುತ್ತಿರುವುದನ್ನು ವಿರೋಧಿಸಿ ರೈತರು , ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಂದಿಗಿಧಾಮದ ಸಭೆಯಲ್ಲಿ ಘರ್ಷಣೆ ಸಂಭವಿಸುವ ಭೀತಿಯಿಂದ ಸರ್ಕಾರ ಸ್ಥಳಾಂತರ ತೀರ್ಮಾನಿಸಿದೆ ಎನ್ನಲಾಗಿದೆ.
