BREAKING:- ಸಚಿವ ಸಂಪುಟ ಸಭೆಯ ಸ್ಥಳ ಬದಲಾವಣೆ: ರೈತ ಹೋರಾಟದ ಭೀತಿಯಿಂದ ಸ್ಥಳಾಂತರ ?

2025ನೇ ಸಾಲಿನ 13ನೇ ಸಚಿವ ಸಂಪುಟ ಸಭೆಯ ಸ್ಥಳದಲ್ಲಿ ಬದಲಾವಣೆ ಮಾಡಲಾಗಿದೆ. ಜೂನ್ 19ರಂದು ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ನಡೆಯಬೇಕಿದ್ದ ಸಭೆಯನ್ನು ಈಗ ಬೆಂಗಳೂರು ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರದಲ್ಲಿ ನಡೆಸಲು ಸರ್ಕಾರ ತೀರ್ಮಾನಿಸಿದೆ. ಸ್ಥಳ ಬದಲಾವಣೆಗೆ ದೇವನಹಳ್ಳಿ ಸುತ್ತಮುತ್ತಲಿನ ರೈತ ಹೋರಾಟದ ಭೀತಿಯೇ ಕಾರಣವೆಂದು ಶಂಕೆ ವ್ಯಕ್ತವಾಗಿದೆ.