ವೃತ್ತಿಪರರಿಗೆ ಬೇಕಾಗಿರುವ ಸಾಧನ ಆರಾಮಧಾಯಕ ವೃತ್ತಿ. ಈ ಪಥ ಜೀವನೋಪಾಯಕ್ಕೆ ಮಾತ್ರ ಸೀಮಿತ. ಹಣ ಮತ್ತು ಅಂತಸ್ತು ಮಾನವನಿಗೆ ಸಂತೋಷ ತರಲಾರದು. ಆತ್ಮ ಗೌರವ ಮತ್ತು ಆತ್ಮ ಸಂತೋಷಕ್ಕೆ ನಮ್ಮ ನಮ್ಮ ಪ್ರವೃತ್ತಿಯು ಬಹು ಉಪಕಾರಿ. ಕೆಲವರಿಗೆ ಹುಟ್ಟಿದಾಗಿಲಿಂದನೂ ತರ ತರವಾದ ಪ್ರವೃತ್ತಿಗಳು ಬಂದಿರುತ್ತವೆ. ಅತಿಯಾಗಿ ದುಡಿದಂತಾ ವ್ಯಕ್ತಿಗೆ ಪರೋಪಕಾರ, ಕೆಲವರಿಗೆ ಸಾಹಿತ್ಯ, ಇನ್ನೊಬ್ಬರಲ್ಲಿ ಸಂಗೀತ ಹೀಗೆ. ಪರೋಪಕಾರದಲ್ಲಿ ಸಿಗುವಂತಹ ಸಂತೋಷ, ಜೀವ ಪರ್ಯಂತ ಕಂಡ ಅನುಭವ ಮತ್ತು ತಿಳಿದಂತಾ ವಿಷಯಗಳಿಂದ ಬಂದ ಸಾಹಿತ್ಯದ ಹೊನಲು, ಇವೆಲ್ಲವೂ ಹಣದಲ್ಲಿ ತೂಗುವಂತಹ ವಸ್ತು ಅಲ್ಲ. ಮೊದ ಮೊದಲು ನನ್ನ ಮನೋವೈದ್ಯ ವೃತ್ತಿಯಲ್ಲಿ ದುಡಿಯುವ ಹಂಬಲ ಅಧಿಕವಾಗಿತ್ತು. ಸಮಯ ಉರುಳಿದಂತೆ ನನಗೆ ತಿಳಿದಂತ ಅನುಭವದಿಂದ ನನ್ನ ವೃತ್ತಿಯಲ್ಲಿ ಆನಂದ ಕಂಡೆ. ಉದಾಹರಣೆಗೆ ಹಿಂದೆ ಮನೋರೋಗಿಗಳನ್ನು ಪರೀಕ್ಷಿಸಿದ ನಂತರ ಅವರಿಗೆ ಔಷದೋಪಚಾರಕ್ಕೆ ಮಾತ್ರ ನನ್ನ ವೃತ್ತಿ ಸೀಮಿತವಾಗಿತ್ತು. ಆದರೇ ಅದು ನನಗೆ ಸಂತೋಷ ತರುತ್ತಿರಲಿಲ್ಲ. ನಾನು ಕಲಿತ ಅನುಭವದ ಪಾಠ ಅಂದರೆ ತಾಳ್ಮೆಯಿಂದ ಕೇಳುವುದು, ಅರ್ಥ ಮಾಡಿಕೊಳ್ಳುವುದು ಮತ್ತು ರೋಗಿಯ ಭಯವನ್ನು ಹೋಗಿಸುವುದು. ಈ ಪಾಠದಿಂದ ಕಲಿತ ಕೆಲಸಕ್ಕೆ ಅಥವಾ ಸಂತೋಷಕ್ಕೆ ಬೆಲೆಯನ್ನು ಕಟ್ಟಲು ಸಾಧ್ಯವೇ?
ಲ್ಯಾಟಿನ್ ಭಾಷೆಯಲ್ಲಿ ‘ಡಾಕ್ಟರ್’ ಪದದ ಅರ್ಥ ‘ಶಿಕ್ಷಕ’ ಎಂದು. ಒಬ್ಬ ವೈದ್ಯ ವೃತ್ತಿಯಲ್ಲಿ ಶಿಕ್ಷಕನಾಗಲು ಸಾಧ್ಯವಿಲ್ಲ. ಆದರೆ ಒಬ್ಬ ವೈದ್ಯ ತನ್ನ ಪ್ರವೃತ್ತಿಯಿಂದ ಶಿಕ್ಷಕನಾಗಬಹುದು. ವೈದ್ಯ ವೈದ್ಯನಾಗಿಯೇ ಉಳಿಯಬಾರದು. ಈತನು ಶಿಕ್ಷಕನಾಗಿ ಪರಿವರ್ತನೆಯಾಗ ಬೇಕು. ಶಿಕ್ಷಕನು ಹೇಗೆ ತನ್ನ ವಿದ್ಯಾರ್ಥಿಗೆ ಪಾಠವನ್ನು ಹೇಳುತ್ತಾನೋ ಹಾಗೆ ವೈದ್ಯ ತನ್ನ ರೋಗಿಗೆ ಶಿಕ್ಷಕನಾಗಬೇಕು. ಶಾರೀರಿಕ ಸಮಸ್ಯೆಗಳು ಬರಬಹುದು, ಆದರೇ ಈ ಕಾಯಿಲೆಗಳು ನಮ್ಮ ಜೀವನ ಶೈಲಿಯ ವೆತ್ಯಾಸದಿಂದ ಮತ್ತು ನಾವು ಕೊಡುವ ಔಷಧ ಉಪಚಾರಗಳಿಗೆ ವಾಸಿ ಆಗದೇ ಇರಬಹುದು ಆದರೆ ವೈದ್ಯ ಶಿಕ್ಷಕನಾಗಿ ಪರಿವರ್ತನೆಯಾದರೆ ಅನೇಕ ವಾಸಿ ಆಗದ ಕಾಯಿಲೆಗಳನ್ನು ಸೂಕ್ಷ್ಮವಾಗಿ ನಿಭಾಯಿಸಬಹುದು. ವೈದ್ಯ ರೋಗಿಗಳ ಜೀವನ ಶೈಲಿಯನ್ನು ಸರಿಪಡಿಸಬೇಕಾದರೆ ಶಿಕ್ಷಕನಾಗಲೇ ಬೇಕು.
ನನ್ನ ಮನೋವೃತ್ತಿಯ ಸುದೀರ್ಘ ಜೀವನದಲ್ಲಿ ಕಂಡಿದ್ದೇ ಖಿನ್ನತೆ. ಜಗತ್ತಿನಲ್ಲಿ ಮನೋವೈದ್ಯರು ಖಿನ್ನತೆ ನೋಡುವದು ಐಸ್ ಬರ್ಗ ನ ತುಟ್ಟ ತುದಿ ನೋಡಿದಂತೆ. ಆದುದರಿಂದ ಪ್ರಪಂಚಾದ್ಯಂತ ಎಷ್ಟೋ ಜನರು ಖಿನ್ನತೆಗೆ ಒಳಗಾಗಿರಬಹುದೆಂಬುದನ್ನು ಊಹಿಸಿ. ಸಾರ್ವತ್ರಿಕವಾಗಿ ನಮ್ಮ ಅರಿವಿಗೆ, ಭಾವನೆ ಮತ್ತು ಕಷ್ಟಗಳನ್ನ ಮೌಲ್ಯ ಮಾಪನಗಳೆಂದು ಕರೆಯಬಹುದೇ? ಹೀಗಿರುವಾಗ ಕಷ್ಟಗಳೇ ಸೂಚ್ಯಂಕವಾದಾಗ “ಆಕ್ಟ ಆಫ್ ಹಿಡೋನಿಸಂ” ಖಿನ್ನತೆಯನ್ನು ತರಿಸಿಬಹುದೇ? ಎಲ್ಲರೂ “ಇನ್ ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್” ಅಥವಾ ಸುಖದ ಕಡೆ ಓಡಿ ಸುಖ ಸಿಗದಿದ್ದಾಗ ಖಿನ್ನತೆ ಕಟ್ಟಿಟ್ಟ ಬುತ್ತಿ. ವೃತ್ತಿಪರರು ಸಹ ಈ ಸೂಚ್ಯಂಕದ ಅಡಿ ಬರಬಹುದಲ್ಲವೆ. ಒಬ್ಬ ಮನೋವೈದ್ಯ ತನ್ನ ಖಿನ್ನತೆಗೆ ಎಲ್ಲಿಗೆ ಹೋಗಬೇಕು? ಭಗವಾನ್ ಬುದ್ಧ ತಿಳಿಸಿದಂತೆ “ಆಸೆಯೇ ದುಃಖದ ಮೂಲ ಕಾರಣ”. ಈ ಸೂತ್ರ ಅರಿತವನಿಗೆ ತನ್ನ ದುಡಿಮೆಯೇ “ನೆಮ್ಮದಿ”, ಸುಖವಲ್ಲ. ಈ ನೆಮ್ಮದಿ ಸಿಗಬೇಕಾದರೆ ಎಲ್ಲಾ ವೃತ್ತಿಪರರು ಹವ್ಯಾಸಗಳನ್ನು ಸ್ವೀಕರಿಸಬೇಕು. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಸುಖಾನುಭವ ಗಗನ ಕುಸುಮ. ನಾನು ಮೊದಲೇ ತಿಳಿಸಿದಂತೆ ನಮ್ಮ ಇಚ್ಚೆಗಳ ಅನುಗುಣವಾಗಿ ಕಾರ್ಯಗಳು ಈಡೇರಿದರೆ ಮಾತ್ರ ಸುಖ. ವಾಸ್ತವವಾಗಿ ಇದು ಅಸಾಧ್ಯ. ಖುಷಿ ಸೂಚ್ಯಂಕವು ಒಂದು ದೇಶದಿಂದ ಇನ್ನೊಂದು ದೇಶಕ್ಕೆ, ಆ ದೇಶದ ಆರ್ಥಿಕತೆ, ವರಮಾನ, ರಾಜಕೀಯ ವೈವಸ್ಥೆ, ಸಾಮಾಜಿಕ ಸ್ಥಿತಿಗತಿಗಳು, ಆರೋಗ್ಯ ಕವಚಗಳು, ಶಿಕ್ಷಣ ನೀತಿ ಮತ್ತು ಧರ್ಮ ಧರ್ಮಾಂಧತೆಗಳು ಹಾಗು ಅತಿಯಾದ ನಂಬಿಕೆಗಳು ಸೂಚಿಸುತ್ತಾ ಹೋಗುತ್ತವೆ. ಆದರೇ, ಎಲ್ಲದಕ್ಕೂ ಮಿಗಿಲಾಗಿ ನಾವು ಕಂಡುಕೊಂಡ ಒಳ್ಳೆಯ ಅಭ್ಯಾಸಗಳು. ಇದೇ ನಮಗೆ ತೃಪ್ತಿ ನೀಡಬಲ್ಲದು. ಪ್ರಪಂಚಾದ್ಯಂತ ಮಾಧ್ಯಮ ಮತ್ತು ಅಂತರ್ಜಾಲದಿಂದ “ಹ್ಯಾಪಿನೆಸ್” ಪಾಠ ಮತ್ತು ಪ್ರವಚನಗಳು ಹೇರಳವಾಗಿ ಸಿಗುವುದು. ಒಂದು ಅಂದಾಜಿನ ಪ್ರಕಾರ ಇದರ ವ್ಯವಹಾಟು 4.1 ಮಿಲಿಯನ್ ಡಾಲರ್ಸ ಎಂದು ಹೇಳಲಾಗಿದೆ. ಹ್ಯಾಪಿನೆಸ್ ಕುರಿತಂತೆ ಓದಲು ಅನೇಕ ಪುಸ್ತಕಗಳು ಸಹ ಸಿಗುವುದು.
ಹಿಂದೆ ಚಕ್ರವರ್ತಿಗಳು ಹೇಳಿದ್ದೇ ಆಟ ಮತ್ತು ಪಾಠ. ಅಂದಿನ ಅಸಂಖ್ಯ ಬುದ್ದಿವಂತರು ಸೈದ್ಧಾಂತಿಕ, ಅಧ್ಯಾತ್ಮ ಮತ್ತು ತತ್ವ ಮೀಮಾಂಸೆಗಳನ್ನು ವಿವರಿಸಿದರೆ ಅಂದೇ ಸೆರೆಮನೆಗೆ ತಳ್ಳಲ್ಪಡುತ್ತಿದ್ದರು. ಕೆಲವರಿಗಂತು ನೇಣು ಹಾಕುತ್ತಿದ್ದರು. ಭಯ, ಜಿಜ್ಞಾಸೆ ಮತ್ತು ಖಿನ್ನತೆ ಆವರಿಸಿದ್ದರೂ ತಮ್ಮ ಸಾಯುವ ಸರದಿ ಬರುವ ಮುನ್ನ ಹಗುರವಾದರು, ಮೌನಕ್ಕೆ ಶರಣಾಗತರಾದರು, ಪಕ್ಷಿಯಂತೆ ಹಾರಿದ್ದರು, ಸಂತೋಷ ಮನಗೊಂಡರು, ನಿರ್ಭಯವೇ ಪ್ರಧಾನವಾಗಿತ್ತು. ಇವರಲ್ಲಿ ಗ್ರೀಕ್ ತತ್ವ ಜ್ಞಾನಿ ಸಾಕ್ರೆಟೀಸ್ ಒಬ್ಬ. ಇವರ ಸಿದ್ಧಾಂತ ಒಂದೇ ಆಗಿತ್ತು. ಅದು “ಗುಡ್ನೆಸ್”. ಒಳ್ಳೆಯದನ್ನೇ ಪ್ರತಿಪಾದಿಸಿದ ಇವರು ಅಲ್ಲಿಯ ಯುವಕರ ಮನಸ್ಸಿಗೆ ಒಳ್ಳೆಯದನ್ನೆ ತುಂಬುತ್ತಿದ್ದರು ಎನ್ನೋ ಆರೋಪದಡಿ “ಹಾಮ್ಲಾಕ್” ವಿಷವನ್ನು ನೀಡಿ ಕೊಂದರು. ತಾರ್ಕಿಕವಾಗಿ “ಒಳ್ಳೆಯತನ” ಸಾಯಲಿಲ್ಲ. ಸಾಯುವ ಮುನ್ನ ಅಲ್ಲಿದ್ದ ಅನುಯಾಯಿಗಳನ್ನು ಕುರಿತು ಸಾಕ್ರೆಟೀಸ್….
“Grievers and non-grievers, my day has approached to pass on my intellectual wealth. Message bearers and non-bearers I have approached the day where my depression and delusions have disappeared. Believers and non-believers, the day has approached wherein my silence I found the Lord, to whom I am forever indebted. The day has approached where I solemnise to leave to understand the KNOW NOTHINGS to KNOW EVERYTHINGS in the quest of happiness by the realised souls. If my literary wealth are passed on, passed on forever from this day of my death I am liberated man like bird”
ಒಳ್ಳೆಯದೆಂಬುದು ಎಂದಿಗೂ ಮರಣ ಹೊಂದುವುದಿಲ್ಲ. ವಿಶ್ವಕ್ಕೆ ನಮ್ಮ ಕೊಡುಗೆಯು ಒಳ್ಳೆಯದೇ ಆಗಿರಬೇಕು. ವೃತ್ತಿ ಮತ್ತು ಪ್ರವೃತ್ತಿಗಳನ್ನು ಒಳ್ಳೆಯದನ್ನೇ ಆರಿಸಿಕೊಳ್ಳಬೇಕು. ಹಣ ಸಂಪತ್ತು ನಮ್ಮ ಸಾಧನೆ ಆಗಬಾರದು. ನಾವು ಎಂದಾದರು ಒಂದು ದಿನ ಪಕ್ಷಿಯಂತೆ ಹಾರಬಯಸಿದರೆ ಅದು ನಮ್ಮ ಒಳ್ಳೆಯ ತನದಿಂದ ಆಗಿರುತ್ತದೆ. ಇದುವೇ ಮಾನವನಿಗೆ ಮಾನದಂಡ ಆಗಿರಬೇಕು…
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

