
– ಕೇಂದ್ರ ಸರ್ಕಾರದ ಮಾಲೀಕತ್ವದ ‘ನವರತ್ನ’ ಕಂಪನಿಗಳಾಗಿ ಇಂಡಿಯನ್ ರೈಲ್ವೆ ಕೇಟರಿಂಗ್ ಆಯಂಡ್ ಟೂರಿಸಂ ಕಾರ್ಪೊರೇಷನ್ (ಐಆರ್ಸಿಟಿಸಿ) ಮತ್ತು ಭಾರತೀಯ ರೈಲ್ವೆ ಹಣಕಾಸು ನಿಗಮವನ್ನು (ಐಆರ್ಎಫ್ಸಿ) ಮೇಲ್ದರ್ಜೆಗೇರಿಸಲು ಸರ್ಕಾರ ಸೋಮವಾರ ಅನುಮೋದನೆ ನೀಡಿದೆ.
– ಭಾರತ ಸರ್ಕಾರ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿದ್ದು ಅವುಗಳನ್ನು ಮಹಾರತ್ನ, ನವರತ್ನ ಮತ್ತು ಮಿನಿರತ್ನ ಎಂದು ವರ್ಗೀಕರಿಸಲಾಗಿದೆ.
– ವಿವಿಧ ಮಾನದಂಡಗಳ ಆಧಾರದ ಮೇಲೆ ಈ ವರ್ಗೀಕರಣವನ್ನು ಮಾಡಿದ್ದು, ವಿವಿಧ ವರ್ಗದ ಸಾರ್ವಜನಿಕ ಉದ್ದಿಮೆಗಳಿಗೆ ವಿವಿಧ ಸೌಲಭ್ಯ ಕಲ್ಪಿಸಲಾಗುತ್ತದೆ.