ಚಾಮರಾಜನಗರ:- 2024-25ನೇ ಸಾಲಿನಲ್ಲಿ ಚಾಮರಾಜನಗರ ಜಿಲ್ಲೆ 13ನೇ ಸ್ಥಾನ ಪಡೆದುಕೊಂಡಿದೆ. ಹಿಂದಿನ ವರ್ಷ 14ನೇ ಸ್ಥಾನದಲ್ಲಿತ್ತು.
ಈ ವರ್ಷ ಜಿಲ್ಲೆಗೆ 73.97ರಷ್ಟು ಶೇಖಡವಾರು ಫಲಿತಾಂಶ ಲಭಿಸಿದ್ದು, ಕಳೆದ ವರ್ಷ ಜಿಲ್ಲೆಗೆ ಶೇ.84.99ರಷ್ಟು ಲಿತಾಂಶ ಬಂದಿತ್ತು. ಪರೀಕ್ಷೆಗೆ ಒಟ್ಟು 6488 ವಿದ್ಯಾರ್ಥಿಗಳು ಹಾಜರಾಗಿದ್ದರು. 4799 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೊಳ್ಳೇಗಾಲ ತಾಲೂಕಿನ ವಿದ್ಯಾರ್ಥಿಗಳು ಮಿಂಚಿದ್ದಾರೆ. ಕಲಾ ವಿಭಾಗ, ವಾಣಿಜ್ಯ ವಿಭಾಗ, ವಿಜ್ಞಾನ ವಿಭಾಗದಲ್ಲಿ ಅಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳಲ್ಲಿ ಕೊಳ್ಳೇಗಾಲದವರೇ ಹೆಚ್ಚು. ಕಲಾ ವಿಭಾಗದಲ್ಲಿ ಕೊಳ್ಳೇಗಾಲದ ನಿಸರ್ಗ ಪದವಿ ಪೂರ್ವ ಕಾಲೇಜಿನ ಬಿ.ಅಶ್ವಿನಿ-573(ಶೇ.95.50), ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಎಂ.ಕಾವ್ಯ-573(ಶೇ.95.5), ಚಾ.ನಗರ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮನೋಜ್ಕುಮಾರ್-572(ಶೇ.95.3), ವಾಣಿಜ್ಯ ವಿಭಾಗದಲ್ಲಿ ಕೊಳ್ಳೇಗಾಲದ ನಿಸರ್ಗ ಕಾಲೇಜಿನ ಎನ್.ಮಹೇಶ್-580(ಶೇ.96.6), ಕಾಮಗೆರೆಯ ಸೆಂಟ್ ಮಾರ್ಗರೇಟ್ಸ್ ಪದವಿ ಪೂರ್ವ ಕಾಲೇಜಿನ ಕೆ.ಸುಪ್ರೀತಾ-577(ಶೇ.96.16), ನಿಸರ್ಗ ಪದವಿ ಪೂರ್ವ ಕಾಲೇಜಿನ ಎಚ್.ತುನುಶ್ರೀ 577(96.2) ವಿಜ್ಞಾನ ವಿಭಾಗದಲ್ಲಿ ನಿಸರ್ಗ ಪದವಿ ಪೂರ್ವ ಕಾಲೇಜಿನ ವಿ.ಅಮೃತಾ 584(ಶೇ.96.3), ಆರ್.ಪ್ರಿಯಾ 583(ಶೇ.96.2), ಪಿ.ಯತೀಶ್ಗೌಡ 583(ಶೇ.96.2), ಚಾಮರಾಜನಗರ ತಾಲೂಕಿನ ಮರಿಯಾಲ ಗ್ರಾಮದ ಮುರುಘರಾಜೇಂದ್ರ ಪದವಿ ಕಾಲೇಜಿನ ಕೆ.ಪಿ.ಪ್ರಭಾಮಣಿ 581(ಶೇ.96.3), ಎಸ್.ಜೀವನ್ 581(ಶೇ.96.3), ಶ್ರೀವಾಸವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಜಿ.ಸಾನಿಕಾ 581(ಶೇ.96.3) ಅಧಿಕ ಅಂಕ ಗಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಒಟ್ಟು 2122 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 1122 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ. 62.3ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಒಟ್ಟು 2343 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 1873 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ.79.94ರಷ್ಟು ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 2023 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 1604 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ. 79.29ರಷ್ಟು ಫಲಿತಾಂಶ ಬಂದಿದೆ.
ಪರೀಕ್ಷೆಗೆ ಹಾಜರಾದ ಪಟ್ಟಣ ಪ್ರದೇಶದ ವಿದ್ಯಾರ್ಥಿಗಳ ಸಂಖ್ಯೆ 4700. ಇವರಲ್ಲಿ ಉತ್ತೀರ್ಣರಾದವರ ಸಂಖ್ಯೆ 3463 ಇದ್ದು, ಶೇ. 73.68ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಂಖ್ಯೆ 1788 ಇದ್ದು, ಇವರಲ್ಲಿ ಉತ್ತೀರ್ಣರಾದವರ ಸಂಖ್ಯೆ 1336 ಆಗಿದ್ದು ಶೇ.74.72ರಷ್ಟು ಫಲಿತಾಂಶ ಬಂದಿದೆ.

2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಲಾಗಿತ್ತು. ಕಳೆದ ವರ್ಷ 14ನೇ ಸ್ಥಾನದಲ್ಲಿದ್ದೆವು. ಈ ಸಲ 13ನೇ ಸ್ಥಾನಕ್ಕೆ ಬಂದಿರುವುದು ಖುಷಿಯ ವಿಚಾರ. ಪರೀಕ್ಷಾ ಅಕ್ರಮ ತಡೆಯಲು ತಾಂತ್ರಿಕವಾಗಿ ಕ್ರಮಗಳು ಕೆಲಸ ಮಾಡಿವೆ. ನೈಜ ಲಿತಾಂಶ ಬಂದಿದೆ. – ಮಂಜುನಾಥ್ ಪ್ರಸನ್ನ(ಮಂಜು ಕೋಡಿಉಗನೆ), ಪಿಯುಡಿಡ
ವರದಿ: ಶ್ರೀ ಸಾಯಿ ಎಸ್ ಮಂಜು
