ಚಾಮರಾಜನಗರ: ರೋಟರಿ ಸಂಸ್ಥೆ ದೊಡ್ಡ ಸೇವಾ ಸಂಸ್ಥೆಗಳಲ್ಲಿ ಒಂದಾಗಿದ್ದು,ಸಮಾಜದ ಉನ್ನತಿಗಾಗಿ ಅನೇಕ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾ ಗೌರರ್ ಸತೀಶ್ ಬೋಳಾರ್ ಹೇಳಿದರು.
ನಗರದ ಡಾ.ರಾಜ್ಕುಮಾರ್ ಕಲಾ ಮಂದಿರದಲ್ಲಿ ನಡೆದ ರೋಟರಿ ಸಂಸ್ಥೆಯ 2025-2026ನೇ ಸಾಲಿನ ಅಧ್ಯಕ್ಷರಾದ ಬಿ.ಚಂದ್ರಶೇಖರ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ. ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಪ್ರದಗ್ರಹಣ ಪ್ರಮಾಣ ವಚನ ಭೋದಿಸಿ ಮಾತನಾಡಿದರು. ರೋಟರಿ ಸಂಸ್ಥೆಯು ಸಮಾಜದ ಅಭಿವೃದ್ಧಿಗಾಗಿ ಹಲವಾರು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳಲ್ಲಿ ಪಲ್ಸ್ ಪೋಲಿಯೋ ವಿರ್ಮೂಲನೆ, ಅಂಧತ್ವ ನಿರ್ಮೂಲನೆ, ಆರೋಗ್ಯ ಸುಧಾರಣೆ, ಶಿಕ್ಷಣಕ್ಕೆ ಆದ್ಯತೆ ಹಾಗೂ ಸ್ವಚ್ಚ ಸಮಾಜ ನಿರ್ಮಾಣ ಮಾಡುವುದು, ಪರಿಸರ ಸಂರಕ್ಷಣೆ ಮಾಡುವುದು ರೋಟರಿ ಸಂಸ್ಥೆಯ ಮುಖ್ಯ ಗುರಿಯಾಗಿದೆ ಎಂದರು.
ಚಾಮರಾಜನಗರ ರೋಟರಿ ಸಂಸ್ಥೆಯು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, 2025-26ನೇ ಸಾಲಿನ ನೂತನ ಪದಾಧಿಕಾರಿಗಳು ಹೆಚ್ಚು ಹೆಚ್ಚು ಸೇವಾ ಕಾರ್ಯಗಳನ್ನು ಮಾಡಲಿ ಎಂದು ಆಶಿಸಿದರು.
ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕಾಗಲವಾಡಿ ಚಂದ್ರು ಮಾತನಾಡಿ, ರೋಟರಿ ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ಡಯಾಲಿಸಿಸ್ ಕೇಂದ್ರ.ಕಣ್ಣಿನ ತಪಾಸಣೆ ಶಿಬಿರ ಸೇರಿದಂತೆ ಇತರ ಸೇವಾ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದರು.
,ಸೇವಾ ಕಾರ್ಯ: 1ಅಂಕಶಟ್ಟಿಪುರದ ತಲಸೋಮಿಯ ಕಾಯಿಲೆಯಿಂದ ಬಳಲುತ್ತಿದ್ದ ಚಿಕಿತ್ಸೆ ವೆಚ್ಚಕ್ಕೆ 43150. ನೀಡಲಾಯಿತು.2. ರೋಟರಿ ಸಂಸ್ಥೆ ದತ್ತು ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ38000 ರೂಗಳನ್ನು ನೀಡಲಾಯಿತು.3 ಕೌದಳ್ಳಿ ಕರುಣ ಟ್ರಸ್ಟ್ 10000 ಮೌಲ್ಯದ ಔಷಧಿಯು ಆಹಾರ ಪದಾರ್ಥಗಳು ನೀಡಲಾಯಿತು.4 ಉತ್ತುವಳ್ಳಿ ವಿದ್ಯಾರ್ಥಿಗೆ 10 ಸಾವಿರ ನೀಡಲಾಯಿತು.5 ಡಯಾಲಿಸಿಸ ಕೇಂದ್ರಕ್ಕೆ ಹತ್ತು ಸಾವಿರ ನೀಡಲಾಯಿತು .ಮತ್ತು ಬ್ಲಾಂಕೆಟ್ ನೀಡಲಾಯಿತು.6 ಎಸ್ ಎಲ್ ಸಿ ವಿದ್ಯಾರ್ಥಿಗೆ ಸನ್ಮಾನಿಸಿ ಪ್ರೋತ್ಸಾಹ ಧನ ನೀಡಲಾಯಿತು ಪಿಯುಸಿ ವಿದ್ಯಾರ್ಥಿಗೆ ಸಹ ಸನ್ಮಾನಿಸಿ ಪ್ರೋತ್ಸಾಹ ಧನ ನೀಡಲಾಯಿತು. ರೋಟರಿ ಸಂಸ್ಥೆ ಕ್ರೀಡೆಯಲ್ಲಿ ಅಮೋಘ ಸಾದನೆ ಮಾಡಿದ ವಿದ್ಯಾರ್ಥಿಯನ್ನು ಸನ್ಮಾನಿಸಿ. ಮತ್ತು ಚಿಕ್ಕಲಿಂಗಯ್ಯ..ಪಾಲಲೋಚನ ಆರಾಧ್ಯ. ದಿಲೀಪ್ ಕುಮಾರ. ಡಾ. ರೆಡ್ಮಿ ಜಾನ್ ಮ್ಯಾರೇಜ್. ಇವರುಗಳ ವಿವಿಧ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಸ ಸನ್ಮಾನಿಸಲಾಯಿತು. ಸೇವಾ ಕಾರ್ಯ ನಡೆಯಿತು.

ಕಾರ್ಯಕ್ರಮದಲ್ಲಿ ಸಹಾಯಕ ಗೌರ್ರ ಗಿರೀಶ್, ವಲಯ ಪ್ರತಿನಿಧಿ ರಮೇಶ್, ನೂತನ ಕಾರ್ಯದರ್ಶಿ ಸಿದ್ದರಾಜು, ನಿಕಟಪೂರ್ವ ಅಧ್ಯಕ್ಷ ಎಲ್.ನಾಗರಾಜು, ಕಾರ್ಯದರ್ಶಿ ಹೆಚ್.ಎಂ.ಗುರುಸ್ವಾಮಿ ಹಾಗೂ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
——–
ನೂತನ ಪದಾಧಿಕಾರಿಗಳು : ರೋಟರಿ ಸಂಸ್ಥೆಯ 2025-26ನೇ ಸಾಲಿನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಬಿ.ಚಂದ್ರಶೇಖರ, ನಿಕಟಪೂರ್ವ ಅಧ್ಯಕ್ಷರಾಗಿ ಎಲ್.ನಾಗರಾಜು, ಉಪಾಧ್ಯಕ್ಷರಾಗಿ ಅಬ್ದುಲ್ ಅಜೀಜ್, ಕಾರ್ಯದರ್ಶಿ ಸಿದ್ದರಾಜು, ಜಂಟಿ ಕಾರ್ಯದರ್ಶಿ ಜಿ.ಅಂಕಶೆಟ್ಟಿ, ಖಜಾಂಚಿ ಆರ್.ಎಂ.ಸ್ವಾಮಿ, ದಂಡಾಯುಧಪಾಣಿಯಾಗಿ ಎಂ.ರಮೇಶ್, ನಿರ್ದೇಶಕರಾಗಿ ಸಿದ್ದಮಲ್ಲಪ್ಪ, ಬಿ.ರತ್ನಮ್ಮ, ಎಸ್.ಅಶೋಕ್, ರಾಜು ವರ್ಗೀಸ್, ಆರ್.ಎನ್.ರಾಮು, ಛೇರ್ಮನ್ ರಾಗಿ ಜಿ.ಆರ್.ಅಶ್ವಥ್ ನಾರಾಯಣ್, ಎಸ್.ಸುರೇಶ್, ಸಿ.ವಿ.ಶ್ರೀನಿವಾಸಶೆಟ್ಟಿ, ಗುರುಸ್ವಾಮಿ, ಡಿ.ನಾಗರಾಜು, ಆರ್.ಪ್ರಕಾಶ್, ಕೆ.ಎಂ.ಮಹಾದೇವಸ್ವಾಮಿ, ಸಿ.ಎ.ರಮೇಶ್, ವಿ.ಪ್ರಭಾಕರ್, ಸಿ.ಎ.ನಾರಾಯಣ್, ಆರ್.ಸುಭಾಷ್, ಎಂ.ಕಮಲ್ ರಾಜು, ಸಿ.ಎನ್. ಚಂದ್ರಪ್ರಭಜೈನ್, ಬಿ.ಕೆ.ಮೋಹನ್ ಮತ್ತಿತರು ಹಾಜರಿದ್ದರು.
