ಹುಬ್ಬಳ್ಳಿ: ಕ್ಯಾಸಲ್ ರಾಕ್ ಮತ್ತು ಕುಲೆಮ್ ನಿಲ್ದಾಣಗಳ ನಡುವೆ ನಡೆಯುತ್ತಿರುವ ರೈಲ್ವೆ ಕಾಮಗಾರಿಗಳ ವಿಸ್ತರಣೆ ಹಿನ್ನೆಲೆಯಲ್ಲಿ ಈ ಕೆಳಗಿನ ರೈಲುಗಳ ಸಂಚಾರದಲ್ಲಿ ಭಾಗಶಃ ರದ್ದತಿ ಮತ್ತು ಮಾರ್ಗ ಬದಲಾವಣೆ ಮಾಡಲಾಗಿದೆ.
ರೈಲುಗಳ ಸಂಚಾರ ಭಾಗಶಃ ರದ್ದು: ಏಪ್ರಿಲ್ 17, 19, 21, 22, 24, 26 ಮತ್ತು 28ರಂದು ಶಾಲಿಮಾರ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 18047 ಶಾಲಿಮಾರ್ – ವಾಸ್ಕೋ ಡ ಗಾಮಾ ಅಮರಾವತಿ ಎಕ್ಸ್ಪ್ರೆಸ್ ರೈಲು ಹುಬ್ಬಳ್ಳಿವರೆಗೆ ಮಾತ್ರ ಸಂಚರಿಸಲಿದೆ. ಮುಂದೆ ಹುಬ್ಬಳ್ಳಿಯಿಂದ ವಾಸ್ಕೋ ಡ ಗಾಮಾ ನಡುವಿನ ಸಂಚಾರ ರದ್ದಾಗಿದೆ.
ಏಪ್ರಿಲ್ 20, 22, 24, 25, 27, 29 ಮತ್ತು ಮೇ 1ರಂದು ರೈಲು ಸಂಖ್ಯೆ 18048 ವಾಸ್ಕೋ ಡ ಗಾಮಾ – ಶಾಲಿಮಾರ್ ಅಮರಾವತಿ ಎಕ್ಸ್ಪ್ರೆಸ್ ರೈಲು ವಾಸ್ಕೋ ಡ ಗಾಮಾ ಬದಲು ಹುಬ್ಬಳ್ಳಿಯಿಂದಲೇ ಹೊರಡಲಿದೆ. ಇದರಿಂದಾಗಿ, ವಾಸ್ಕೋ ಡ ಗಾಮಾ ಮತ್ತು ಹುಬ್ಬಳ್ಳಿ ನಡುವಿನ ಸಂಚಾರ ಇರುವುದಿಲ್ಲ.
ಏಪ್ರಿಲ್ 17 ಮತ್ತು 24ರಂದು ತನ್ನ ಮೂಲ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17419/17021 ತಿರುಪತಿ/ಹೈದರಾಬಾದ್ – ವಾಸ್ಕೋ ಡ ಗಾಮಾ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಹುಬ್ಬಳ್ಳಿವರೆಗೆ ಮಾತ್ರ ಸಂಚರಿಸಲಿದೆ. ಹೀಗಾಗಿ, ಹುಬ್ಬಳ್ಳಿ ಮತ್ತು ವಾಸ್ಕೋ ಡ ಗಾಮಾ ನಡುವೆ ಸಂಚಾರ ಭಾಗಶಃ ರದ್ದುಗೊಂಡಿದೆ.
ಏಪ್ರಿಲ್ 18 ಮತ್ತು 25ರಂದು ರೈಲು ಸಂಖ್ಯೆ 17420/17022 ವಾಸ್ಕೋ ಡ ಗಾಮಾ – ತಿರುಪತಿ/ಹೈದರಾಬಾದ್ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ವಾಸ್ಕೋ ಡ ಗಾಮಾ ಬದಲು ಹುಬ್ಬಳ್ಳಿಯಿಂದಲೇ ಹೊರಡಲಿದೆ. ವಾಸ್ಕೋ ಡ ಗಾಮಾ ಮತ್ತು ಹುಬ್ಬಳ್ಳಿ ನಡುವಿನ ಸಂಚಾರ ಇರಲ್ಲ.
ಏಪ್ರಿಲ್ 18, 23 ಮತ್ತು 25ರಂದು ಸಿಕಂದರಾಬಾದ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17039 ಸಿಕಂದರಾಬಾದ್ – ವಾಸ್ಕೋ ಡ ಗಾಮಾ ದ್ವಿ-ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಹುಬ್ಬಳ್ಳಿವರೆಗೆ ಮಾತ್ರ ಸಂಚರಿಸಲಿದೆ. ಹುಬ್ಬಳ್ಳಿ-ವಾಸ್ಕೋ ಡ ಗಾಮಾ ನಡುವಿನ ಸಂಚಾರ ಬಂದ್ ಮಾಡಲಾಗಿದೆ.
ಏಪ್ರಿಲ್ 19, 24 ಮತ್ತು 26ರಂದು ರೈಲು ಸಂಖ್ಯೆ 17040 ವಾಸ್ಕೋ ಡ ಗಾಮಾ – ಸಿಕಂದರಾಬಾದ್ ದ್ವಿ-ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ವಾಸ್ಕೋ ಡ ಗಾಮಾ ಬದಲು ಹುಬ್ಬಳ್ಳಿಯಿಂದಲೇ ಹೊರಡಲಿದ್ದು, ವಾಸ್ಕೋ ಡ ಗಾಮಾ ಮತ್ತು ಹುಬ್ಬಳ್ಳಿ ನಡುವಿನ ಸಂಚಾರ ರದ್ದಾಗಿದೆ.
ಈ ರೈಲುಗಳ ಮಾರ್ಗ ಬದಲಾವಣೆ: ಏಪ್ರಿಲ್ 19 ಮತ್ತು 26ರಂದು ಪುಣೆಯಿಂದ ಹೊರಡುವ ರೈಲು ಸಂಖ್ಯೆ 11097 ಪುಣೆ – ಎರ್ನಾಕುಲಂ ಪೂರ್ಣ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಸತಾರಾ ಮತ್ತು ಸ್ಯಾನ್ವೊರ್ಡೆಮ್ ನಡುವಿನ ನಿಲುಗಡೆ ಬಿಟ್ಟು ಪುಣೆ, ಪನ್ವೇಲ್, ರೋಹಾ ಮತ್ತು ಮಡಗಾಂವ್ ಮಾರ್ಗವಾಗಿ ಸಂಚರಿಸಲಿದೆ.
ಏಪ್ರಿಲ್ 21 ಮತ್ತು 28ರಂದು ಎರ್ನಾಕುಲಂ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 11098 ಎರ್ನಾಕುಲಂ – ಪುಣೆ ಪೂರ್ಣ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಸ್ಯಾನ್ವೊರ್ಡೆಮ್ ಮತ್ತು ಸತಾರಾ ನಡುವಿನ ನಿಲುಗಡೆಯನ್ನು ಬಿಟ್ಟು ಮಡಗಾಂವ್, ರೋಹಾ, ಪನ್ವೇಲ್ ಮತ್ತು ಪುಣೆ ಮಾರ್ಗವಾಗಿ ಚಲಿಸಲಿದೆ.
ಏಪ್ರಿಲ್ 21 ಮತ್ತು 28ರಂದು ವಾಸ್ಕೋ ಡ ಗಾಮಾದಿಂದ ಹೊರಡುವ ರೈಲು ಸಂಖ್ಯೆ 17315 ವಾಸ್ಕೋ ಡ ಗಾಮಾ – ವೇಲಾಂಕಣಿ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಸ್ಯಾನ್ವೊರ್ಡೆಮ್ ಮತ್ತು ಸೇಲಂ ನಡುವಿನ ನಿಲುಗಡೆಯನ್ನು ಬಿಟ್ಟು ಮಡಗಾಂವ್, ಮಂಗಳೂರು ಜಂಕ್ಷನ್, ಶೋರನೂರ್ ಮತ್ತು ಈರೋಡ್ ಮಾರ್ಗವಾಗಿ ತೆರಳಲಿದೆ.
ಏಪ್ರಿಲ್ 22 ಮತ್ತು 29ರಂದು ವೇಲಾಂಕಣಿಯಿಂದ ಹೊರಡುವ ರೈಲು ಸಂಖ್ಯೆ 17316 ವೇಲಾಂಕಣಿ – ವಾಸ್ಕೋ ಡ ಗಾಮಾ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಸೇಲಂ ಮತ್ತು ಸ್ಯಾನ್ವೊರ್ಡೆಮ್ ನಡುವಿನ ನಿಲುಗಡೆಯನ್ನು ಬಿಟ್ಟು ಈರೋಡ್, ಶೋರನೂರು, ಮಂಗಳೂರು ಜಂಕ್ಷನ್ ಮತ್ತು ಮಡಗಾಂವ್ ಮಾರ್ಗವಾಗಿ ಚಲಿಸಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದ್ದಾರೆ.
