ಚನ್ನರಾಯಪಟ್ಟಣ: ನಗರದ ಸರ್ಕಾರಿ ಅಲ್ಪ ಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು ಮಕ್ಕಳ ದಿನಾಚರಣೆಯನ್ನು ಮಕ್ಕಳ ಜೊತೆಗೂಡಿ ಪ್ರಾಂಶುಪಾಲೆ ಎಚ್ ಸುನಿತಾ ಉದ್ಘಾಟಿಸಿದರು.
ಅವರು ಮಾತನಾಡುತ್ತಾ ಮಕ್ಕಳು ಮುಂದಿನ ಭವಿಷ್ಯದ ಪ್ರಜೆಗಳು ಹಾಗಾಗಿ ಉನ್ನತ ಗುರಿ ಹಾಗೂ ಆದರ್ಶ ನಿಮ್ಮ ಜೀವನದ ಕನಸಾಗಬೇಕು ಆ ಮೂಲಕ ಗುರು ಹಿರಿಯರ, ಮಾತಾ ಪಿತೃಗಳ ಪ್ರೀತಿಗೆ ಪಾತ್ರರಾಗಿ ಚೆನ್ನಾಗಿ ವಿದ್ಯೆ ಕಲಿತು ಮೊಬೈಲ್ ಅಥವಾ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಗೆ ಬಲಿಯಾಗದೆ ಉನ್ನತ ಹುದ್ದೆ ಪಡೆದು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು,
ಸಮಾರಂಭದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳಾದ ತಶ್ರೀಫ, ನಂದಿನಿ, ಸಂಧ್ಯಾ, ಚಿತ್ರ, ಚಂದನ, ಶಶಿಕಲಾ, ಪ್ರತಿಕ್ಷ, ಮುಂತಾದವರು ಕೇಕ್ ಕತ್ತರಿಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಸಂಭ್ರಮಿಸಿದರು ಇದರ ಅಂಗವಾಗಿ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ರತ್ನಾಕರ್, ಧರ್ಮೇಗೌಡ , ಶ್ರೀಮತಿ ಭವ್ಯ ,ಶ್ರೀಮತಿ ಸ್ವಾತಿ, ರುಬಿನ, ತೇಜಸ್ವಿನಿ ಹಾಜರಿದ್ದರು. ಉಪನ್ಯಾಸಕರಾದ ಜಯಶೀಲ ನಿರೂಪಿಸಿದರು ಸವಿತಾ ಪೂಜಾರಿಯವರು ವಂದಿಸಿದರು..
ವರದಿ : ಮಂಜುನಾಥ್ ಐ ಕೆ
