ಚನ್ನರಾಯಪಟ್ಟಣ : ನಗರದ ಗಾಂಧಿ ವೃತದಲ್ಲಿ ಇರುವ ರಾಯರ ರಂಗಮಂದಿರದ ರಾಯರ ಸೇವಾ ಕೇಂದ್ರದಲ್ಲಿ ಸರಳತೆಯಿಂದ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕನ್ನಡ ದೀಪ ಹಚ್ಚುವ ಮೂಲಕ ಹಾಸನದಲ್ಲಿ ಸಮಾಜಮುಖಿ ಸೇವೆಯನ್ನು ತೊಡಗಿಸಿಕೊಂಡಿರುವ ಹಿರಿಯರಾದ ಶ್ರೀಮತಿ ಪ್ರಭಾವತಿ ಮಾತನಾಡಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ನನ್ನ ಜೀವನದಲ್ಲೇ ಪ್ರಪ್ರಥಮವಾಗಿ ಭಾಗವಹಿಸಿ ನಮ್ಮ ಕನ್ನಡ ನಾಡು ನುಡಿ ಸಂಭ್ರಮಕ್ಕೆ ಸಾಕ್ಷಿಯಾಗಿರುವುದು ಸಂತೋಷ ತಂದಿದೆ ಎಂದರು. ಇದೆ ಸಂದರ್ಭದಲ್ಲಿ 2 ವರ್ಷದ ಬಾಲೆ ಕುಮಾರಿ ಸಮತಾಮಂಜುನಾಥ್ ರವರು ಕನ್ನಡ ಬಾವುಟ ಹಿಡಿದು ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಇದೇ ಸಂದರ್ಭದಲ್ಲಿ ಹಿರಿಯರಿಗೆ ಕನ್ನಡ ಬಾವುಟ ಕೊಟ್ಟು ಅಭಿನಂದಿಸಲಾಯಿತು ಬಂದಂತಹ ಎಲ್ಲಾ ಕನ್ನಡಿಗರಿಗೂ ಕನ್ನಡ ಬಾವುಟ ಜೊತೆಗೆ ಸಿಹಿ ಪದಾರ್ಥ ನೀಡಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮಿಸಲಾಗಿತ್ತು . ಇದೇ ಸಂದರ್ಭದಲ್ಲಿ ರಾಯರ ಸೇವಾ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಅನಿತಾ ಪ್ರಕಾಶ್ ಸಿಬ್ಬಂದಿಗಳಾದ ಶ್ರೀಮತಿ ಶ್ರುತಿ, ಶ್ರೀಮತಿ ರಾಣಿ ಹಾಗೂ ಶ್ರೀಮತಿ ಎ ವೈ ಸರಿತಾಮಂಜುನಾಥ್, ಎಲ್ ಐ ಸಿ ಇಲಾಖೆಯ ಜಗದೀಶ್, ಅರುಣ್, ಸೇರಿದಂತೆ ಇತರರು ಹಾಜರಿದ್ದರು
ವರದಿ : ಐ ಕೆ ಮಂಜುನಾಥ್
