ಚನ್ನರಾಯಪಟ್ಟಣ: ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿ ಸಾತೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರದಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ನಿರ್ದೇಶಕರು ಹಾಗೂ ಜೆಡಿಎಸ್ ಪಕ್ಷದ ನಿಷ್ಠಾವಂತ ಕಟ್ಟಾಳು ಮತ್ತು ಅಂಕೇನಹಳ್ಳಿ ಗ್ರಾಮದ ಯುವ ಮುಖಂಡರಾದ ಮಹೇಶರವರು ಅವಿರೋಧವಾಗಿ ಆಯ್ಕೆಯಾದರು.
ಸಾತೇನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದ ಕೃಷ್ಣೇಗೌಡರು ರಾಜೀನಾಮೆ ನೀಡಿದ್ದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತ್ತು. ಅಂಕೇನಹಳ್ಳಿ ಗ್ರಾಮದ ಯುವ ಜೆಡಿಎಸ್ ಮುಖಂಡ ಮಹೇಶ್ ಹೊರತುಪಡಿಸಿ ಬೇರೆ ಯಾವ ನಿರ್ದೇಶಕರು ನಾಮಪತ್ರ ಸಲ್ಲಿಸದೆ ಇದುದ್ದರಿಂದ ಇವರ ಆಯ್ಕೆಯನ್ನು ಚುನಾವಣಾಧಿಕಾರಿ ವಿಜಯೇಂದ್ರ ಘೋಷಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಮಹೇಶ್ ಮಾತನಾಡಿ, ಪ್ರಸ್ತುತ ಸಂಘದಲ್ಲಿ ವ್ಯಾಪ್ತಿಗೆ ಒಳಪಡುವ 965 ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 5.46 ಕೋಟಿ ರೂ. ಸಾಲ ನೀಡಲಾಗಿದೆ. ಇದುವರೆಗೂ 554 ಜನ ರೈತರ ನೀಡಿದ 2 ಕೋಟಿ 15 ಲಕ್ಷ ಸಾಲ ಮನ್ನವಾಗಿದೆ. ಮುಂಬರುವ ದಿನಗಳಲ್ಲಿ ಹೊಸ ರೈತರಿಗೆ ಸಾಲ ನೀಡಲು ಕ್ಷೇತ್ರದ ಶಾಸಕರಾದ ಹೆಚ್.ಡಿ.ರೇವಣ್ಣನವರು, ಮತ್ತು ವಿಧಾನಪರಿಷತ್ತು ಸದಸ್ಯರು ಹಾಗೂ ಆಪೆಕ್ಸ್ ಬ್ಯಾಂಕ್ ನಿದೇಶಕರಾದ ಡಾ.ಸೂರಜ್ ರೇವಣ್ಣನವರ ಸಹಕಾರ ಕೋರಲಾಗುವುದು, ಬ್ಯಾಂಕಿನ ಮೇಲ್ಭಾಗಕ್ಕೆ ಹೆಚ್ಚುವರಿ ಕಟ್ಟಡವನ್ನು ನಿರ್ಮಾಣ ಮಾಡಲು ಶ್ರಮಿಸಲಾಗುವುದು, ಜೊತೆಗೆ ಸಂಘದ ಬಲವರ್ಧನೆಗೆ ಹೆಚ್ಚು ಶ್ರಮಿಸುವುದಾಗಿ ತಿಳಿಸಿದ ಅವರು ತಮ್ಮನ್ನು ಸಂಘಕ್ಕೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಸಂಘದ ನಿಕಟಪೂರ್ವ ಅಧ್ಯಕ್ಷರು,ಉಪಾಧ್ಯಕ್ಷರು, ಸೇರಿ ಎಲ್ಲ ನಿರ್ದೇಶಕರು ಮತ್ತು ಅರ್ಶಿವದಿಸಿದ ಶಾಸಕರಾದ ಹೆಚ್.ಡಿ.ರೇವಣ್ಣ ಮತ್ತು ಬಾಲಕೃಷ್ಣ ಹಾಗೂ ಡಾ.ಸೂರಜ್ ರೇವಣ್ಣನವರಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷರಾದ ಮೆಡಿಕಲ್ ವೆಂಕಟೇಶ್, ಟಿಎಪಿಸಿಎಂಎಸ್ ನಿರ್ದೇಶಕರುಗಳಾದ ಕುಂಬಾರಹಳ್ಳಿ ರಮೇಶ್, ಮರಗೂರು ಅನಿಲ್ ಕುಮಾರ್,ನಟ್ಟೇಕೆರೆ ನಾಗರಾಜು, ತರಬೇನಹಳ್ಳಿ ನಂಜುಂಡೇಗೌಡ, ಸಾತೇನಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾದ ಅಂಕೇನಹಳ್ಳಿ ಮಹೇಶ್, ಉಪಾಧ್ಯಕ್ಷರಾದ ತರಬೇನಹಳ್ಳಿ ಶ್ರೀಮತಿ ತಾಯಮ್ಮ, ನಿರ್ದೇಶಕರುಗಳಾದ ಪಿ ಮಹೇಶ್, ನೆಟ್ಟೆಕೆರೆ ಕೃಷ್ಣೆಗೌಡ, ನಾಗರಾಜು, ತಿರುಮಲೇಗೌಡ, ಚಂದ್ರೇಗೌಡ, ಅಪ್ಪಾಜಿ ಗೌಡ, ಶಂಭುಲಿಂಗಯ್ಯ, ಶಿವೇಗೌಡ, ಶ್ರೀಮತಿ ಭಾಗ್ಯ,ಮಹೇಶ್, ನವೋದಯ ವಿದ್ಯಾ ಸಂಸ್ಥೆಯ ಮಾಜಿ ಕಾರ್ಯದರ್ಶಿಗಳಾದ ಬಸವರಾಜು, ಜೆಡಿಎಸ್ ಪಕ್ಷದ ಮುಖಂಡರುಗಳಾದ ಮಹೇಶ್, ಕರಡೆವು ಸತೀಶ್,ಡಿ.ಕಾಳೇನಹಳ್ಳಿ ಬಸವರಾಜ್,ಬರಾಳು ಮಹೇಂದ್ರ,ಗೋವಿನಕೆರೆ ರಮೇಶ್, ಬ್ಯಾಂಕ್ ನಾಮಿನಿ ಎಸ್.ಕೆ.ಅಭಿಲಾಷ್, ಸಂಘದ ಕಾರ್ಯನಿರ್ವಹಣಾಧಿಕಾರಿ ಎನ್ ಟಿ ಕಿರಣ್ ಕುಮಾರ್, ಸಿಬ್ಬಂದಿಗಳಾದ ಎಚ್ ಡಿ ಶ್ವೇತ, ಎಂಡಿ ಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ
