ಚನ್ನರಾಯಪಟ್ಟಣ: ಕರ್ನಾಟಕ ರಕ್ಷಣಾ ವೇದಿಕೆ ದಂಡಿಗನಹಳ್ಳಿ ಹೋಬಳಿ ಘಟಕದ ವತಿಯಿಂದ ಶೇಕಡ 60ರಷ್ಟು ಕನ್ನಡ ಬಳಕೆ ಕಡ್ಡಾಯ ಎಂಬ ಆಂದೋಲನದ ಮುಖಾಂತರ ಹೋಬಳಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಶೇಕಡ 60ರಷ್ಟು ಕನ್ನಡ ಬಳಕೆ ಮಾಡುವಂತೆ ಎಲ್ಲಾ ಶಾಲಾ ಕಾಲೇಜುಗಳು ಹಾಗೂ ಬ್ಯಾಂಕ್ ಗಳು ಹೋಟೆಲ್ ಗಳು ಅಂಗಡಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾದ ಮಧು ಕರಡೇವು ನೇತೃತ್ವದಲ್ಲಿ ಬಳದರೆ ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ವಿ ವಿಶ್ವಾಸ್ ರವರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ದಂಡಿಗನಹಳ್ಳಿ ಹೋಬಳಿಯ ಅಧ್ಯಕ್ಷರಾದ ಫಯಾಜ್ ಹೋಬಳಿಯ ಉಪಾಧ್ಯಕ್ಷರಾದ ಅನಿಲ್ ಕೆ ಗೌಡ ಹಾಗೂ ಹೋಬಳಿಯ ಪ್ರಧಾನ ಕಾರ್ಯದರ್ಶಿ ಸಿ ಎಲ್ ದಿನೇಶ್ ಕುಮಾರ್ ಮತ್ತು ಕರವೇ ಕಾರ್ಯಕರ್ತರು ದಂಡಿಗನಹಳ್ಳಿ ಹೋಬಳಿ ಘಟಕದ ವತಿಯಿಂದ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಸಹಾಯಕ ಉಪನಿರೀಕ್ಷಕರು ಹೇಮೇಶ್ ರವರಿಗೆ ಮನವಿ ಸಲ್ಲಿಸಿ ನಂತರ ಬಳದರೆ ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ವಿ ವಿಶ್ವಾಸ್ ಮುಖಾಂತರವೂ ಬ್ಯಾಂಡೆಡ್ ಬಟ್ಟೆ ಶೋರೂಮ್, ಬ್ಯಾಂಕ್ , ಶಾಲಾ ಕಾಲೇಜುಗಳು , ಪೆಟ್ರೋಲ್ ಬಂಕ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತ್ತು.
ಈ ಸಂದರ್ಭದಲ್ಲಿ ಕರೆಡೆವು ಮಧು, ಬಳದರೆ ಗ್ರಾಮ ಪಂಚಾಯಿತಿ ಸದಸ್ಯರಾದ ಸಿ ವಿ ವಿಶ್ವಾಸ್, ನಂಜೇಗೌಡ ಎ ಆರ್ , ವಜ್ರೇಶ್ ಬಿ ಜೆ ದಂಡಿಗನಹಳ್ಳಿ ಹೋಬಳಿ ಅಧ್ಯಕ್ಷರು ಫಯಾಜ್ ಯು ಎಂ ಉಪಾಧ್ಯಕ್ಷರು ಅನಿಲ್ ಕೆ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಮಾರ್ ಸಿ ಎಲ್, ಹಾಗೂ ಫೈಝನ್ , ಶ್ರೇಯಸ್ ಹಾಗೂ ದಂಡಿಗನಹಳ್ಳಿ ಹೋಬಳಿ ಕರವೇ ಕಾರ್ಯಕರ್ತರು ಸೇರಿದಂತೆ ಇತರರು ಹಾಜರಿದ್ದರು.
ವರದಿ : ಐ ಕೆ ಮಂಜುನಾಥ್
