ಚನ್ನರಾಯಪಟ್ಟಣ: ಟಿಎಪಿಸಿಎಂಎಸ್ ಚುನಾವಣಾ ಕಣದಿಂದ ಹಿಂದೆ ಸರಿದ ಬಿಸಿಎಂಬಿ ಮೀಸಲು ಕ್ಷೇತ್ರದ ಅಭ್ಯರ್ಥಿ ಜಾಂಟಿ ರಘು. ಪಟ್ಟಣದ ಜೆಡಿಎಸ್ ಮುಖಂಡರಾದ ಶ್ರೀನಿಧಿ ವೆಂಕಟೇಶ್ ರವರ ಮನೆಯಲ್ಲಿ ಜೆಡಿಎಸ್ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ನಂತರ. ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಬಿ ವರ್ಗದ ಬಿ ಸಿ ಎಂ ಬಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಕುಂಬಾರಹಳ್ಳಿ ರಮೇಶ್ ಗೆ ಬೆಂಬಲ ಸೂಚಿಸಿ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ತಿಳಿಸಿದರು.
ಜೆಡಿಎಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ಮೂಲಕ ಜೆಡಿಎಸ್ ಬೆಂಬಲಿತ 7 ಅಭ್ಯರ್ಥಿಗಳಿಗೆಪರವಾಗಿ ಮತಯಾಚನೆ ಮಾಡುವ ಮೂಲಕ ಏಳು ಜನರ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು. ಕರ್ನಾಟಕ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕರಾದ ಪುಟ್ಟಸ್ವಾಮಿಗೌಡ ಮಾತನಾಡಿ ನಮ್ಮ ಶ್ರವಣಬೆಳಗೂಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ ಎನ್ ಬಾಲಕೃಷ್ಣ ಮಾತಿಗೆ ಗೌರವ ಕೊಟ್ಟು ಈ ದಿನ ಚುನಾವಣಾ ಕಣದಿಂದ ಹಿಂದೆ ಸರಿದ ಜಾಂಟಿ ರಘುಗೆ ಧನ್ಯವಾದಗಳನ್ನು ತಿಳಿಸಿದರು.
ಮುಂದಿನ ದಿನಗಳಲ್ಲಿ ರಘುರವರಿಗೆ ರಾಜಕೀಯ ಅವಕಾಶವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ ಎನ್ ಪುಟ್ಟಸ್ವಾಮಿಗೌಡ, ಮೆಡಿಕಲ್ ವೆಂಕಟೇಶ್, ನವೋದಯ ವಿದ್ಯಾ ಸಂಸ್ಥೆಯ ನಿರ್ದೇಶಕರುಗಳಾದ ಜಲೇಂದ್ರ, ಸಂತೋಷ್, ಜೆಡಿಎಸ್ ಯುವ ಮುಖಂಡರುಗಳಾದ ಐಡಿಯಲ್ ಸ್ಟುಡಿಯೋ ಮಂಜಣ್ಣ, ಅನ್ಸರ್, ಪರಮೇಶ್, ಜತ್ತೆನಹಳ್ಳಿ ಪಚ್ಚಿ ಮಲ್ಲವನಘಟ್ಟ ಅನಂತ್ ,ಸೇರಿದಂತೆ ಇತರರು ಹಾಜರಿದ್ದರು.
ವರದಿ : ಮಂಜುನಾಥ್ ಐ ಕೆ
