ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ಕಂಟ್ರಾಕ್ಟರ್ ಅಸೋಸಿಯೇಷನ್ ಅಂಡ್ ಕ್ಲಬ್ ವತಿಯಿಂದ ಗಾರ್ಡನ್ ಪಾರ್ಟಿ ಹಾಲ್ ಉದ್ಘಾಟನೆ ಮಾಡಲಾಯಿತು.
ಕಂಟ್ರಾಕ್ಟರ್ ಕ್ಲಬ್ ಅಧ್ಯಕ್ಷ ಜಗದೀಶ್ ಮಾತನಾಡಿ ನಮ್ಮ ಕಂಟ್ರಾಕ್ಟರ್ ಕ್ಲಬ್ ನ 21ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮೂರನೇ ಮಹಡಿಯಲ್ಲಿ ಇದ್ದಂತಹ ಖಾಲಿ ಜಾಗದಲ್ಲಿ ಹಿರಿಯ ಸದಸ್ಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಗಾರ್ಡನ್ ಪಾರ್ಟಿ ಹಾಲ್ ಉದ್ಘಾಟನೆ ಮಾಡಲಾಗಿದೆ. ಇದನ್ನು ಎಲ್ಲಾ ಸದಸ್ಯರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ ಎನ್ ಪುಟ್ಟಸ್ವಾಮಿಗೌಡ, ಎಂ ಕೆ ಮಂಜೇಗೌಡ, ಕ್ಲಬ್ ಹಿರಿಯ ಸದಸ್ಯರಾದ ಎಚ್ಎಸ್ ಶ್ರೀಕಂಠಪ್ಪ, ಎಚ್ಎನ್ ರಾಮಣ್ಣ, ಆರಿಫ್, ಕುಂಬಾರಹಳ್ಳಿ ರಮೇಶ್, ಕಂಟ್ರಾಕ್ಟರ್ ಕ್ಲಬ್ ಗೌರವಾಧ್ಯಕ್ಷರಾದ ಸಿ ಎಸ್ ಶಂಕರೇಗೌಡ, ಅಧ್ಯಕ್ಷರಾದ ಎಸ್ ಬಿ ಜಗದೀಶ್, ಉಪಾಧ್ಯಕ್ಷರಾದ ರಮೇಶ್, ಕಾರ್ಯದರ್ಶಿ ಧರ್ಮೇಂದ್ರ, ಸಹ ಕಾರ್ಯದರ್ಶಿ ಶ್ರೀ ಕೆಂಪೇಗೌಡ, ಖಜಾಂಚಿ ಸಿ ಕೆ ನರೇಂದ್ರಬಾಬು, ನಿರ್ದೇಶಕರುಗಳಾದ ಜಯರಾಮ್, ದೇವರಾಜೇಗೌಡ, ನಟರಾಜ್, ರಾಮಕೃಷ್ಣ, ಸತೀಶ್, ನಂಜೇಗೌಡ, ಯೋಗೇಶ್, ಮಂಜೇಗೌಡ ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ
