ಚನ್ನರಾಯಪಟ್ಟಣ: ತಾಲೂಕು ಶ್ರವಣಬೆಳಗೊಳ ಹೋಬಳಿ ದಡಿಘಟ್ಟ ಗ್ರಾಮದ ಪ್ರಮುಖ ನಾಯಕರು ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಹಿರಿಯ ಮುಖಂಡರಾದ ಮಂಜೇಗೌಡ್ರು, ಸೋಮೇಗೌಡ, ಪ್ರಭಾಕರ್, ನಂಜುಂಡೇಗೌಡ, ಗೋಪಾಲ್, ಧರ್ಮ, ಯೋಗೇಶ್, ಮನು, ಕೃಷ್ಣ, ಪರಮೇಶ, ಅಭಿನಾಶ್, ವಿನೋದ್ ಹಾಗೂ ಯುವ ಮುಖಂಡ ಶರತ್ ಸೇರಿದಂತೆ ಹಲವರು ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ್ ಅವರ ನೇತೃತ್ವದಲ್ಲಿ ಅಧಿಕೃತವಾಗಿ ಪಕ್ಷ ಪ್ರವೇಶಿಸಿದರು.
ಈ ಸೇರ್ಪಡೆ ಮೂಲಕ ದಡಿಘಟ್ಟ ಗ್ರಾಮದಲ್ಲಿ ಬಿಜೆಪಿ ಸಂಘಟನೆಗೆ ಮತ್ತಷ್ಟು ಬಲ ದೊರಕುವ ನಿರೀಕ್ಷೆಯಿದ್ದು, ಸ್ಥಳೀಯ ರಾಜಕೀಯದಲ್ಲಿ ಇದು ಮಹತ್ವದ ಬೆಳವಣಿಗೆ ಎನ್ನಲಾಗಿದೆ.
-ಮಂಜುನಾಥ್ ಐ ಕೆ ಚನ್ನರಾಯಪಟ್ಟಣ
