ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಕಾಚೇನಹಳ್ಳಿ ಏತನೀರಾವರಿಯಿಂದ ದಂಡಿಗನಹಳ್ಳಿ ಹೋಬಳಿ ಸಂಪನ್ನಗೊಂಡಿದೆ ಎಂದು ಕುಂದೂರು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಕರಡೇವು ಮಧು ತಿಳಿಸಿದರು.
ಕಾಚೇನಹಳ್ಳಿ ಏತ ನೀರಾವರಿ ಯೋಜನೆಯಿಂದ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಸಾಕಷ್ಟು ಗ್ರಾಮಗಳ ಅಂತರ್ಜಲ ವೃದ್ದಿಯಾಗಿದೆ ಎಂದರು.ತಾಲೂಕಿನ ದಂಡಿಗನಹಳ್ಳಿ ಹೋಬಳಿ ದೊಡ್ಡಕರಡೇವು ಗ್ರಾಮದ ದೊಡ್ಡಕೆರೆ ಹಾಗೂ ಬೇರಿಕಟ್ಟೆ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು, ಕ್ಷೇತ್ರದ ಶಾಸಕರಾದ ಹೆಚ್.ಡಿ.ರೇವಣ್ಣನವರ ಶ್ರಮದಿಂದ ದಂಡಿಗನಹಳ್ಳಿ ಹೋಬಳಿಯ ಸಾಕಷ್ಟು ಗ್ರಾಮಗಳ ಕೆರೆಗೆ ಹೇಮಾವತಿ ನದಿ ನೀರು ಹರಿಯುತ್ತಿದೆ, ಇದರಿಂದ ಸಾವಿರಾರು ಮಂದಿ ರೈತರು ನೆಮ್ಮದಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಕಾಚೇನಹಳ್ಳಿ ಮೊದಲ ಹಂತದ ಏತನೀರಾವರಿಯಿಂದ ರಾಷ್ಟ್ರೀಯ ಹೆದ್ಧಾರಿ ದಾಟಲು ಆಗಲಿಲ್ಲ, ಎರಡನೇ ಹಂತದಿoದ ಅಣ್ಣೇನಹಳ್ಳಿ, ಅಪ್ಪೇನಹಳ್ಳಿವರೆಗೆ ನೀರು ಹರಿದು ಇದೀಗ ದೊಡ್ಡ ಕರಡೇವು ಗ್ರಾಮದ ಕೆರೆ ಭರ್ತಿಯಾಗಿದೆ. ಈ ಮೂಲಕ ಮೂರನೇ ಹಂತದ ಏತನೀರಾವರಿ ಕಾಮಗಾರಿ ಮುಗಿದ ಮೇಲೆ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಸಾಕಷ್ಟು ಹಳ್ಳಿಗಳಿಗೂ ಇದರ ಲಾಭವಾಗುತ್ತದೆ, ಏತನೀರಾವರಿಗಳು ಬರಡು ಭೂಮಿಗೆ ಜೀವಜಲವಾಗಿದೆ, ಕೃಷಿ ಚಟುವಟಿಕೆ, ಹೈನುಗಾರಿಕೆ ಮಾಡುವುದರ ಜೊತೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಅನುಕೂಲ ಆಗುತ್ತಿವೆ ಎಂದು ತಿಳಿಸಿದರು.
ಇದನ್ನು ಓದಿ: ತುಮಕೂರು : ತುಮಕೂರು ವಲಯ ಸಂಚಾಲಕ ಸಿ.ಆರ್.ಹರೀಶ್ ರವರನ್ನು ಸನ್ಮಾನಿಸಿದ ಗೃಹಸಚಿವ ಡಾ|ಜಿ.ಪರಮೇಶ್ವರ್
ದೊಡ್ಡಕರಡೇವು ಗ್ರಾಮದ ಕೆರೆ ಭರ್ತಿಯಾದ ಮೇಲೆ ಹೆಚ್ಚುವರಿ ನೀರು ಮದಲಪುರ, ತಿಮ್ಲಾಪುರ, ಯಲಿಯೂರು, ಬರಗೂರು, ಗೆಜ್ಜಗಾರನಹಳ್ಳಿ, ಕತ್ತರಿಘಟ್ಟ ಗ್ರಾಮದ ಕೆರೆಗಳಿಗೆ ಹರಿಯುವ ಮೂಲಕ ಸಾಕಷ್ಟು ಕೃಷಿ ಭೂಮಿಯಲ್ಲಿ ಕೊಳವೆ ಬಾವಿ ಅಂತರ್ಜಲ ವೃದ್ದಿಯಾಗುತ್ತಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶ್, ಶಿವನಂಜಮ್ಮ, ನಂಜಪ್ಪ, ಎಪಿಎಂಸಿ ಮಾಜಿ ನಿರ್ದೇಶಕ ಸತೀಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವೀಶ್, ಕುಂದೂರು ಪಿಎಸಿಸಿಎಸ್ ಅಧ್ಯಕ್ಷ ಹರೀಶ್, ನಿರ್ದೇಶಕರಾದ ಜಯಲಕ್ಷ್ಮೀ, ಸತೀಶ್, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವೆಂಕಟರಮಣಸ್ವಾಮಿ, ಪಿಎಸಿಸಿಎಸ್ ಮಾಜಿ ಅಧ್ಯಕ್ಷ ಮಂಜಣ್ಣ, ಮುಖಂಡರಾದ ದಿನೇಶ್, ನಾಗೇಂದ್ರ, ಪರಮೇಶ್, ವಿಕಾಸ್, ಕುಂದೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಕರೆಡೇವು ಮಧು, ಪಟಾಕಿ ಸತೀಶ್, ಲಾರಿ ಸತೀಶ್, ಗ್ಯಾರಹಳ್ಳಿ ರವೀಶ್, ಎಂಎಲ್ಸಿ ಸೂರಜ್ ರೇವಣ್ಣ ಆಪ್ತ ಸಹಾಯಕರಾದ ವಿಕಾಸ್, ಬೆಳಗುಲಿ ದೊರೆ ,ಹರೀಶ್, ವೆಂಕಟೇಗೌಡ, ಶುಂಠಿ ದಿನೇಶ್ ಕುಂದೂರು ದಿವಾಕರ್, ಸುಬ್ಬಣ್ಣ, ಮಾದಲಾಪುರ ಮಂಜಣ್ಣ, ಶಿವಪ್ಪ, ಮಧು, ನಂಜಪ್ಪ, ದೊಡ್ಡ ಕರಡೆವು ನಾರಾಯಣಸ್ವಾಮಿ, ರಂಗಸ್ವಾಮಿ, ಗ್ಯಾರೆಹಳ್ಳಿ ಮಣಿ ರಾಜು, ಚಿಕ್ಕ ಕರಡೇವು ತಿಮ್ಮಪ್ಪಣ್ಣ, ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ

[…] ಓದಿ: ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋ… ಸ್ವಾತಿ ಭಾರದ್ವಾಜ್ ನಮ್ಮ ಜಿಲ್ಲೆಯ […]