ಚನ್ನರಾಯಪಟ್ಟಣ: ಪಟ್ಟಣದ ತಾಲೂಕು ಕಚೇರಿ ಹಾವರಣದಲ್ಲಿ ನಿರ್ಮಿಸಲಾಗಿರುವ ಅಂಬೇಡ್ಕರ್ ಪ್ರತಿಮೆಯ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು, ಪ್ರತಿಮೆ ಅನಾವರಣಕ್ಕೆ ಜನವರಿ 26ರಂದು ದಿನಾಂಕ ನಿಗದಿಯಾಗಿತ್ತು ಕಾರಣಾಂತರಗಳಿಂದ ದಿನಾಂಕವನ್ನು ಮುಂದೂಡಲಾಗಿದೆ ಎಂದರು.

ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ.ಮಹದೇವಪ್ಪನವರು
ಕಾರ್ಯಕ್ರಮದ ಸಲುವಾಗಿ ಹೊಳೆನರಸಿಪುರಕ್ಕೆ ತೆರಳುವ ಮಾರ್ಗಮಧ್ಯೆ ಪಟ್ಟಣಕ್ಕೆ ಭೇಟಿ ನೀಡಿ ಅಂಬೇಡ್ಕರ್ ಪ್ರತಿಮೆಯನ್ನ ವೀಕ್ಷಿಸಿ ಮುಖಂಡರೊಂದಿಗೆ ಚರ್ಚಿಸಿರುವುದು ಸ್ವಾಗತರ್ಥ ಎಂದ ಅವರು, ಪ್ರತಿಮೆ ಅನಾವರಣಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಅವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಪ್ರತಿಮೆ ಕೆಳಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳು ಬಾಕಿ ಉಳಿದಿದ್ದು ಪ್ರತಿಮೆ ಮುಂಭಾಗ ಪ್ರತಿಮೆಗೆ ಅಡ್ಡವಾಗಿರುವ ಸಣ್ಣ ಮರಗಳನ್ನು ತೆರವುಗೊಳಿಸಲು ಮುಖಂಡರು ಮನವಿ ಮಾಡಿದ್ದು ಹಾಗೂ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಸುತ್ತಲೂ ನಿರ್ಮಾಣ ಮಾಡಲಾಗಿರುವ ಗ್ರಿಲ್ ಅಡ್ಡಿಯಾಗುತ್ತಿರುವುದರಿಂದ ಸಣ್ಣಪುಟ್ಟ ಮಾರ್ಪಾಡು ಮಾಡಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಸಚಿವರೊಂದಿಗೆ ಚರ್ಚಿಸಿ ಸೂಕ್ತವಾದ ದಿನಾಂಕವನ್ನು ನಿಗದಿಪಡಿಸಿ ಎಲ್ಲಾ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಅವರುಗಳ ಸಲಹೆ ಪಡೆದು ಯಾವುದೇ ಲೋಪವಾಗದಂತೆ ಗೌರವಪುರಕವಾಗಿ ಪ್ರತಿಮೆ ಅನಾವರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ಆವರಣದ ಮತ್ತೊಂದು ಬದಿಯಲ್ಲಿ ಮಹಾತ್ಮ ಗಾಂಧಿಯವರ ಪುತ್ತಳಿಯನ್ನು ನಿರ್ಮಿಸಲು ಉದ್ದೇಶಿಸಿದ್ದು ಅಡಿಪಾಯದ ನಕ್ಷೆ ಸಿದ್ಧವಾಗಿದ್ದು, ಕಾಮಗಾರಿಯನ್ನು ಪ್ರಾರಂಭಿಸಲು ಸೂಚಿಸಲಾಗಿದ್ದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಪುತ್ತಳಿ ನಿರ್ಮಾಣವಾಗಿ ಪುತ್ತಳಿ ಸ್ಥಾಪನೆ ಮಾಡಲು ಮೂರ್ನಾಲ್ಕು ತಿಂಗಳು ಕಾಲಾವಕಾಶದ ಅವಶ್ಯಕತೆ ಇದ್ದು, ಕಾಮಗಾರಿಗಳ ಮುಗಿದ ನಂತರ ಪುತ್ತಳಿ ಅನಾವರಣಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ದಲಿತ ಮುಖಂಡರಾದ ಬೆಳಗಿಹಳ್ಳಿಪುಟ್ಟಸ್ವಾಮಿ, ಜಿ ಆರ್ ಮಂಜುನಾಥ್, ನವಿಲೇ ಹೊಸೂರು ಚಂದ್ರಪ್ಪ, ಬಿಸಿಎಂ ಮಂಜಣ್ಣ, ದಂಡಿಗನಹಳ್ಳಿ ರವಿ, ಧರಣೇಶ್, ಶ್ರವಣಬೆಳಗೊಳ ಲಕ್ಷ್ಮಣ್, ಕಬ್ಬಳಿ ಕೇಶವ ಮೂರ್ತಿ ಟಿಎಪಿಸಿಎಂಎಸ್ನ ಅಧ್ಯಕ್ಷ ವೆಂಕಟೇಶಮೂರ್ತಿ, ನಿರ್ದೇಶಕರಾದ ಅನಿಲ್ ಮರಗೂರು, ತಹಶೀಲ್ದಾರ್.ಜಿ.ಎಸ್ ಶಂಕರಪ್ಪ, ಸಮಾಜ ಕಲ್ಯಾಣಾಧಿಕಾರಿ ಡಿ.ಆರ್.ತ್ಯಾಗರಾಜ್, ಪುರಸಭಾ ಮುಖ್ಯಾಧಿಕಾರಿ ಆರ್.ಯತೀಶ್ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು
