ಚನ್ನರಾಯಪಟ್ಟಣ : ಶಾಲೆಗಳಲ್ಲಿ ಪಠ್ಯದ ಜೊತೆಗೆ ಮಕ್ಕಳಿಗೆ ಮಾನವೀಯ ಮೌಲ್ಯವನ್ನು ತುಂಬುವ ನಿಟ್ಟನಲ್ಲಿ ಶಿಕ್ಷಕರು ನೀತಿಪಾಠಗಳು, ರಾಮಾಯಣ, ಮಹಾಭಾರತದ ಕಥೆಗಳನ್ನು ತಿಳಿಸುವ ಕೆಲಸವಾಗಬೇಕೆಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ಅಕ್ಷರ ಸ್ಕೂಲ್ ಎಕ್ಸ್ಲೆನ್ಸ್ ಶಾಲೆಯಲ್ಲಿ ನಡೆದ ಅಕ್ಷರ ಕಲಾ ವೈವಿದ್ಯಮ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಕಾರಯುತ ಶಿಕ್ಷಣಕ್ಕೆ ಒತ್ತು ನೀಡಬೇಕು. ನಮ್ಮ ನಡವಳಿಕೆ ಆಧಾರದ ಮೇಲೆ ಸಮಾಜದಲ್ಲಿ ಗೌರವ ಸಿಗುತ್ತದೆ. ಗುರಿಮುಟ್ಟುವ ತನಕ ಹಿಂದುರುಗಿ ನೋಡಬಾರದು. ಯಶಸು ದೊರೆತ ಬಳಿಕ ನಮ್ಮ ಶ್ರೇಯಸ್ಸಿಗೆ ಕಾರಣರಾದವರನ್ನು ಮರೆಯಬಾರದು ಎಂದು ಹೇಳಿದರು.

ಮಕ್ಕಳ ಜತೆಗೆ ಪೋಷಕರು ಸಂವಹನ ನಡೆಸಬೇಕು. ಅವರ ಚಲನವಲನವನ್ನು ಗಮನಿಸಬೇಕು. ಅವರು ಮಾಡುವ ಒಳ್ಳೆ ಕೆಲಸಕ್ಕೆ ಬೆಂಬಲ ನೀಡಿದರೆ ಆತ್ಮಸ್ಥೆöÊರ್ಯ ವೃದ್ದಿಯಾಗಿ ಗುರಿ ಸಾಧಿಸುತ್ತಾರೆ ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳ ಭವಿಷ್ಯ ಚೆನ್ನಾಗಿರುತ್ತದೆ. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಾದರೆ ಶಿಕ್ಷಣದೊಂದಿಗೆ ಪಠ್ಯೇತರ ಚÀಟುವಟಿಕೆಗಳಾದ ಕಲೆ, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಹಾಗು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಇದನ್ನು ಓದಿ: ಚನ್ನರಾಯಪಟ್ಟಣ: ಗ್ರಾಮೀಣ ಕ್ರೀಡೆಗಳಿಗೆ ಕೇಂದ್ರದಿಂದ ಹೆಚ್ಚಿನ ಪ್ರೋತ್ಸಾಹ – ಡಾ. ಸಿ.ಎನ್. ಮಂಜುನಾಥ್
ಶಿಕ್ಷಣ ತಜ್ಞ ಆರ್.ಎ. ಚೇತನ್ರಾಮ್ ಮಾತನಾಡಿ, ನಮ್ಮ ಆಲೋಚನೆ ಸಕಾರಾತ್ಮಕವಾಗಿರಬೇಕು. ಅಂಕಗಳು ಜೀವನದಲ್ಲಿ ನಿರ್ಧಾರಕವಲ್ಲ. ಜ್ಞಾನದ ಜೊತೆೆಕೌಶಲ, ಆತ್ಮಬಲ ಮಹತ್ವದ್ದಾಗಿದೆ. ಮಾನವೀಯ ಮೌಲ್ಯ, ಸಮಾಜಸೇವೆ, ನೊಂದವರ ನೆರವಿಗೆ ಧಾವಿಸುವುದು ಮುಖ್ಯವಾದುದು. ಮಕ್ಕಳು ಆಸಕ್ತಿದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಆಪ್ತಸಮಾಲೋಚನೆ ನಡೆಸುವ ಕೇಂದ್ರ ತೆರೆಯಬೇಕು. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಸ್ಥಿತಿ ಸುಧಾರಿಸಲು ಅನುಕೂಲವಾಗುತ್ತದೆ. ಮೊಬೈಲ್ ಗೀಳು ಕಡಿಮೆಮಾಡಿ ಓದುವ ಹವ್ಯಾಸರೂಢಿಸಿಕೊಳ್ಳಬೇಕು.. ಓದುವ ಕೌಶಲ, ಪರೀಕ್ಷೆಯ ಕೌಶಲ,ಸ್ಪರ್ಧಾತ್ಮಕ ಪರೀಕ್ಷೆಯ ಕೌಶಲ ತಿಳಿದಿರಬೇಕು ಎಂದರು. ಇದೇ ಸಂದರ್ಭದಲ್ಲಿ
ಡಿವೈಎಸ್ಪಿ ಕುಮಾರ್, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಆರ್. ಅನಿಲ್ ಕುಮಾರ್, ಖಜಾಂಚಿ ಸಿ.ಸಿ. ಚೇತನ್ ಮಾತನಾಡಿದರು.
ಪ್ರಾಂಶುಪಾಲ ಸುನೀಲ್ ಪ್ಯಾಟ್ರಿಕ್, ಅಧ್ಯಕ್ಷೆ ಪಿ. ಸರೋಜದೇವಿ, ನಿರ್ದೇಶಕ ತಿರುಮಲಪ್ರಸಾದ್ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
– ಮಂಜುನಾಥ್ ಐ.ಕೆ.

[…] […]