ಚನ್ನರಾಯಪಟ್ಟಣ, ಮಾ.29: ತಾಲೂಕಿನ ನೇಗಿಲಯೋಗಿ ಶ್ರೇಯಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಂಘದ ಅಧ್ಯಕ್ಷರಾಗಿ ಗೌಡಗೆರೆ ಜಿ.ಬಿ. ಸತೀಶ್, ಉಪಾಧ್ಯಕ್ಷರಾಗಿ ಎಚ್.ಆರ್. ಪ್ರಕಾಶ್, ಕಾರ್ಯದರ್ಶಿಯಾಗಿ ಮಹೇಶ್, ಖಜಾಂಚಿಯಾಗಿ ನವೀನ್ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ್ ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕರಾದ ವಾಸು ಅಂಕೇನಹಳ್ಳಿ, ನಿಕಟ ಪೂರ್ವ ಅಧ್ಯಕ್ಷರಾದ ಬೆಂಕಿ ಸೋಮಣ್ಣ, ಗೌರವಾಧ್ಯಕ್ಷರಾದ ಚಂದ್ರೇಗೌಡ, ಕಾರ್ಯದರ್ಶಿ ಮಹೇಶ್, ಸಾಂಸ್ಕೃತಿಕ ಅಧ್ಯಕ್ಷರಾದ ಗಣೇಶ್, ಶ್ರೀ ಗುರುಕಲಾ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ನಂಜುಂಡೇಗೌಡ ಉಪಸ್ಥಿತರಿದ್ದರು.
ಅದೇ ರೀತಿ, ಸಂಘದ ನಿರ್ದೇಶಕರಾದ ಯೋಗೇಶ್, ಗಂಗಾಧರ, ಕೃಷ್ಣೇಗೌಡ, ಮಧು, ಮಂಜು, ಜಗದೀಶ್, ನಾಗರಾಜು, ದಿನೇಶ್, ಸುರೇಶ್, ವಾಸುದೇವ, ಬಸವರಾಜು, ಪ್ರಸನ್ನ, ಸೋಮೇಗೌಡ, ಆನಂದ ಸೇರಿದಂತೆ ಸಂಘದ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
– ಮಂಜುನಾಥ್ ಐ ಕೆ
