ಚನ್ನರಾಯಪಟ್ಟಣ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ ಇವರ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹೊಳೆನರಸೀಪುರದಲ್ಲಿ ವಿದ್ಯಾರ್ಥಿಗಳಿಗೆ ತುರ್ತು ಪ್ರಥಮ ಚಿಕಿತ್ಸೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಶ್ರೀ ಭರತ್ ಕುಮಾರ್ ಹೆಚ್ .ಜಿ ಹಾಗೂ ಜಯರಾಮ್ ಎನ್ ಮತ್ತು ಡಾ. ತೇಜಸ್ವಿ ರವರು ವೇದಿಕೆ ಗಣ್ಯರು ಉದ್ಘಾಟಿಸಿದರು,
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭರತ್ ಕುಮಾರ್ ಹೆಚ್ .ಜಿ ಚೇರ್ಮನ್ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ ಇವರು ಇಂದು ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡುತ್ತಾರೆ. ಅದೇ ರೀತಿ ನಮ್ಮ ಸಂಸ್ಥೆಯ ವತಿಯಿಂದ ವಿಶೇಷವಾಗಿ ತುರ್ತು ಪ್ರಥಮ ಚಿಕಿತ್ಸೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸುವುದರ ಜೊತೆಗೆ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಈ ಕಾರ್ಯಕ್ರಮವನ್ನು ಆಯೋಜಿಸಿರುವ ಕಾರಣ ದಿನನಿತ್ಯ ನೂರಾರು ಆರೋಗ್ಯ ಸಮಸ್ಯೆಗಳು ಹಾಗೂ ರಸ್ತೆ ಅಪಘಾತಗಳು ಮತ್ತು ಹೃದಯಘಾತ ನಮ್ಮ ಸುತ್ತಮುತ್ತಲು ನೋಡುತ್ತಿರುತ್ತೇವೆ ಕೆಲವು ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ವೈದ್ಯಕೀಯ ಸೇವೆಯು ಲಭ್ಯವಿಲ್ಲದೆ ಪ್ರಾಣ ಹಾನಿ ಆಗುವ ಸಂದರ್ಭವಿರುತ್ತದೆ.

ಆದಕಾರಣ ಇಂದು ನಾವು ವಿದ್ಯಾರ್ಥಿಗಳಿಗೆ ವೈದ್ಯರಿಲ್ಲದೆ ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವುದು ಹೇಗೆ ಎಂಬುದರ ಉದಾರಣೆಯೊಂದಿಗೆ ಇಂದು ಉಪನ್ಯಾಸವನ್ನು ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀಯುತ ಡಾ. ತೇಜಸ್ವಿ ರವರು ಆಡಳಿತ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆ ಹಾಗೂ ನಿರ್ದೇಶಕರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಹಾಸನ ರವರು ವಿದ್ಯಾರ್ಥಿಗಳಿಗೆ ಹಾವು ಕಚ್ಚಿದರೆ, ರಸ್ತೆ ಅಪಘಾತ, ಹೃದಯಘಾತ, ಪಾರ್ಶ್ವವಾಯು ಹೀಗೆ ಹಲವಾರು ಕಾಯಿಲೆಗಳಿಗೆ ವೈದ್ಯರಿಲ್ಲದೆ ಹೇಗೆ ತುರ್ತು ಪ್ರಥಮ ಚಿಕಿತ್ಸೆ ಮಾಡಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ವಸ್ತು ಪ್ರದರ್ಶನದ ಮೂಲಕ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜೀವನಶೈಲಿ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಮತ್ತು ಸಾರ್ವಜನಿಕ ವಲಯದಲ್ಲಿ ಹೇಗೆ ಆರೋಗ್ಯವಾಗಿ ಬದುಕಬೇಕು ಎಂಬುವುದರ ಬಗ್ಗೆ ತಿಳಿಸಿಕೊಟ್ಟರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀಯುತ ಜಯರಾಮ್. ಎನ್ ರವರು ಈ ಕಾರ್ಯಕ್ರಮವು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ತಾಲೂಕು ಘಟಕವು ನಮ್ಮ ಕಾಲೇಜಿನಲ್ಲಿ ಆಯೋಜಿಸಿರುವುದು ವಿದ್ಯಾರ್ಥಿಗಳಿಗೆ ಹಾಗೂ ಎಲ್ಲ ಸಿಬ್ಬಂದಿಗಳಿಗೂ ಅತಿ ಮುಖ್ಯವಾದ ಹಾಗೂ ಅಮೂಲ್ಯವಾದ ಕಾರ್ಯಕ್ರಮ ಎಂದು ಭಾವಿಸುತ್ತೇನೆ, ಕಾರಣ ನಮಗೆ ತಿಳಿಯದ ಎಷ್ಟೋ ಆರೋಗ್ಯದ ಸಮಸ್ಯೆಗಳ ಕುರಿತು ಇಂದು ಪ್ರಥಮ ಚಿಕಿತ್ಸೆ ನೀಡುವುದರ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿ ಸುಮಾರು 160ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆರೋಗ್ಯದ ಅರಿವು ಮೂಡಿಸಿದ್ದು ಸಂತೋಷದ ವಿಷಯ ಎಂದು ಭಾವಿಸುತ್ತೇನೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಶ್ರೀಯುತ ಜಬಿವುಲ್ಲಾ ಬೇಗ್ ಕಾರ್ಯದರ್ಶಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ,
ಶ್ರೀ ಗೋವಿಂದರಾಜು ಅಧ್ಯಕ್ಷರು ಕಾಲೇಜು ಯುವ ರೆಡ್ ಕ್ರಾಸ್ ಘಟಕ, ಶ್ರೀ ಸುದರ್ಶನ್ ಶಿಕ್ಷಕರು, ಶ್ರೀ ವಿಜಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.
– ಮಂಜುನಾಥ್ ಐ .ಕೆ.
