ಚನ್ನರಾಯಪಟ್ಟಣ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕ ಹಾಗೂ ಬಾಹುಬಲಿ ಆಸ್ಪತ್ರೆ, ಶ್ರವಣಬೆಳಗೊಳ, ನಾರಾಯಣ ಆಸ್ಪತ್ರೆ, ಮೈಸೂರು ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು,
ಈ ಶಿಬಿರದ ಉದ್ಘಾಟನೆಯನ್ನು ಭರತ್ ಕುಮಾರ್ ಹೆಚ್. ಜಿ ಚೇರ್ಮನ್ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕ ಚನ್ನರಾಯಪಟ್ಟಣ ಹಾಗೂ ಡಾ. ಪೂರ್ಣಿಮಾ ವೈದ್ಯಾಧಿಕಾರಿಗಳು ಬಾಹುಬಲಿ ಆಸ್ಪತ್ರೆ ಹಾಗೂ ವೇದಿಕೆ ಗಣ್ಯರು ಉದ್ಘಾಟಿಸಿದರು,
ಈ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಭರತ್ ಕುಮಾರ್ ಹೆಚ್.ಜಿ ರವರು ನಮ್ಮ ದೇಶಕ್ಕೆ ರೈತರು ಅನ್ನದಾತರು ಎಂದು ಭಾವಿಸುತ್ತಾರೆ. ಕಾರಣ ರೈತ ತಾನು ಬೆಳೆದ ಶುದ್ಧ ದವಸ ಧಾನ್ಯ ಹಾಗೂ ಆಹಾರ ಸಾಮಗ್ರಿಗಳನ್ನು ಮನುಜ ಕುಲಕ್ಕೆ ನೀಡುವ ಪರಿಶುದ್ಧ ಮನಸ್ಸು ಹೊಂದಿರುವ ಏಕೈಕ ವ್ಯಕ್ತಿ, ಇಂದು ಕೋಟ್ಯಂತರ ಜನರಿಗೆ ಅನ್ನ ನೀಡುವ ಅನ್ನದಾತ, ಭೂಮಿತಾಯಿಗೆ ಇಬ್ಬರು ಮಕ್ಕಳು ಮೊದಲನೆಯವರು ರೈತ, ಮತ್ತೊಬ್ಬರು ಯೋಧ, ರೈತ ತಾನು ಬೆಳೆಯೋ ಬೆಳೆಯಿಂದ ಲಕ್ಷಾಂತರ ಕುಟುಂಬಕ್ಕೆ ಅನ್ನದಾತನಾಗುತ್ತಾನೆ, ಸೈನಿಕ ತನ್ನ ಕುಟುಂಬವನ್ನು ದೂರ ಇಟ್ಟು ಇಡೀ ದೇಶವೇ ತನ್ನ ಕುಟುಂಬವೆಂದು ಭಾವಿಸಿ ದೇಶ ಸೇವೆ ಮಾಡುತ್ತಾರೆ, ಆದಕಾರಣ ಭೂಮಿ ತಾಯಿಯ ನೆಚ್ಚಿನ ಮಕ್ಕಳೆಂದರೆ ರೈತ ಹಾಗೂ ಸೈನಿಕ ಎಂದು ಹೇಳಲು ಭಾವಿಸುತ್ತೇನೆ. ಇಂದು ಎಷ್ಟೋ ಗ್ರಾಮಗಳಲ್ಲಿ ರೈತಪಿ ವರ್ಗದವರು ತುರ್ತು ಚಿಕಿತ್ಸೆ ಅಗತ್ಯ ಬರುವವರೆಗೂ ಆರೋಗ್ಯದ ಬಗ್ಗೆ ಗಮನಹರಿಸುವುದಿಲ್ಲ ಆದಕಾರಣ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕ ಚನ್ನರಾಯಪಟ್ಟಣ ಹೆಚ್ಚು ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದೇವೆ ಇಂದು ಕಣ್ಣಿನ ತಪಾಸಣೆ, ಹೃದಯ ತಪಾಸಣೆ, ಬಿಪಿ ಶುಗರ್, ಶ್ವಾಸಕೋಶ ಸಮಸ್ಯೆ ಹಾಗೂ ಇತರೆ ಕಾಯಿಲೆಗಳಿಗೆ ಉಚಿತ ವೈದ್ಯಕೀಯ ಸೇವೆಗಳು ಹಾಗೂ ಆರೋಗ್ಯ ತಪಾಸಣೆಯನ್ನು ನಡೆಸುತ್ತಿದ್ದೇವೆ, ಹೆಚ್ಚಿನ ರೀತಿ ಸಾರ್ವಜನಿಕರು ಈ ಶಿಬಿರದ ಅನುಕೂಲವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು,
ಈ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಡಾ. ಪೂರ್ಣಿಮಾ ರವರು ಗ್ರಾಮೀಣ ಭಾಗಕ್ಕೆ ಆರೋಗ್ಯ ತಪಾಸಣಾ ಶಿಬಿರವು ತುಂಬಾ ಅವಶ್ಯಕ ಕಾರಣ ಹೆಚ್ಚು ಗ್ರಾಮೀಣ ಭಾಗದ ರೈತಪಿ ವರ್ಗದವರು ಆರೋಗ್ಯದ ಬಗ್ಗೆ ನಿರ್ಲಕ್ಷ ತೋರುತ್ತಾರೆ ಆದಕಾರಣ ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಬಾಹುಬಲಿ ಆಸ್ಪತ್ರೆಯಲ್ಲಿ ಆವರಣದಲ್ಲಿ ಇಂದು ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು, ಈ ಕಾರ್ಯಕ್ರಮದಲ್ಲಿ ಸುಮಾರು 318ಕ್ಕೂ ಹೆಚ್ಚು ಸಾರ್ವಜನಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು ಹಾಗೂ 38 ಸಾರ್ವಜನಿಕರು ರಕ್ತದಾನ ಮಾಡಿದರು ಎಂದು ತಿಳಿಸಿದರು, ಈ ಕಾರ್ಯಕ್ರಮದಲ್ಲಿ ಜಬಿವುಲ್ಲಾ ಬೇಗ್ ಕಾರ್ಯದರ್ಶಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚನ್ನರಾಯಪಟ್ಟಣ, ಕಿಶೋರ್ ಕುಮಾರ್ ಸಿ.ಎಸ್ ಖಜಾಂಚಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ,
ಡಾ. ಮಾನಸ, ಡಾ.ಜೀವನ್, ನಾರಾಯಣ ಆಸ್ಪತ್ರೆ, ಬಾಹುಬಲಿ ವ್ಯವಸ್ಥಾಪಕರು ಬಾಹುಬಲಿ ಆಸ್ಪತ್ರೆ ಶ್ರವಣಬೆಳಗೊಳ, ಋಷಭ ಸಹಾಯಕರು ಬಾಹುಬಲಿ ಆಸ್ಪತ್ರೆ, ಚೇತನ್ ಪ್ರಯೋಗಶಾಲ ತಜ್ಞರು ಬಾಹುಬಲಿ ಆಸ್ಪತ್ರೆ, ಉದಯ ಶಂಕರ್ ನಿರ್ದೇಶಕರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ, ಹಾಗೂ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
