ಚನ್ನರಾಯಪಟ್ಟಣ: ಹಾಸನ ಹಸಿರು ಸೇನೆ ರೈತ ಸಂಘದ ಹಾಸನ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಕೆ.ಹೆಚ್. ತಾರಾವತಿ ಅವರ ನೇತೃತ್ವದಲ್ಲಿ ಉಪಾಧ್ಯಕ್ಷರು ನಾಗರಾಜು, ಜಯಣ್ಣ ನಾಯ್ಕ್, ರಾಜಾ ನಾಯ್ಕ್, ಚಂದನ್ ಹಾಗೂ ಮಹಿಳಾ ನಾಯಕರಾದ ನಂಜಮ್ಮ, ಹೇಮಲತಾ, ಸರೋಜಮ್ಮ, ಗೌರಮ್ಮ, ಹೇಮಶಕು, ರೇಖા, ಮಂಜುಳಾ, ಶ್ವೇತಾ ಸೇರಿದಂತೆ ಪ್ರತಿನಿಧಿ ತಂಡವು ಹಾಸನದಿಂದ ಬೆಳಗಾವಿಗೆ ತೆರಳಿದೆ.
ಸಂಸತ್ತಿನ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನಡೆದ ರೈತರ ಬೃಹತ್ ಹೋರಾಟದ ಸಮಾವೇಶದಲ್ಲಿ ಈ ತಂಡ ಸಕ್ರಿಯವಾಗಿ ಭಾಗವಹಿಸಿ, ರೈತರ ಹಕ್ಕು-ಹಿತಗಳ ಪರವಾಗಿ ಧ್ವನಿಯೆತ್ತಿತ್ತು. ವಿವಿಧ ಕ್ಷೇತ್ರಗಳ ರೈತರು ಭಾಗಿಯಾಗಿದ್ದ ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಲ್ಲಿ ಹಾಸನ ಹಸಿರು ಸೇನೆ ತಂಡ ಮಹತ್ತರ ಪಾತ್ರ ವಹಿಸಿದೆ.
ಇದನ್ನು ಓದಿ: ಚನ್ನರಾಯಪಟ್ಟಣ: ಪಿಎಸ್ಐ ಮಲ್ಲಪ್ಪನ ವಿರುದ್ದ ಕ್ರಮಕ್ಕೆ ಭರವಸೆ — ದಲಿತಪರ ಸಂಘಟನೆಗಳ ಪ್ರತಿಭಟನೆ ಹಿಂತೆಗೆತ
ರೈತರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಣಾಮಕಾರಿ ಪರಿಹಾರ ಕಲ್ಪಿಸುವುದೇ ಈ ಹೋರಾಟದ ಮುಖ್ಯ ಉದ್ದೇಶ ಎಂದು ನಾಯಕರು ತಿಳಿಸಿದರು.
– ಮಂಜುನಾಥ್ ಐ.ಕೆ.
