ಚನ್ನರಾಯಪಟ್ಟಣ: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಡಾ.ಸುಭುದೇಂದ್ರ ತೀರ್ಥ ಶ್ರೀಪಾದಂಗಳವರ ಆಶೀರ್ವಾದ ಸೋಮವಾರ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಧ್ಯರಾದನೆಯ ಅಂಗವಾಗಿ ಬೆಳಗ್ಗೆ ಪಂಚಾಮೃತ ಹಾಗು ವಿಶೇಷವಾಗಿ ಗೋಪುರ ಅಲಂಕಾರವನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು ರಾಯರ ರಂಗಮಂದಿರದ ಗೋಮಾತೆ ರಾಧೆಯನ್ನು ವೀಕ್ಷಿಸಲು ಭಕ್ತರು ಸರದಿ ಸಲಿನಲ್ಲಿ ನಿಂತಿದ್ದು ವಿಶೇಷವಾಗಿತ್ತು.
ಇದೇ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು ಕುಸುಮ ಬಾಲಕೃಷ್ಣ, ರಿಯಲ್ ಎಸ್ಟೇಟ್ ಉದ್ಯಮಗಾದ ತುಳಸಿ ರಮೇಶ್, ರಾಮಚಂದ್ರನ್ ಸೇರಿದಂತೆ ಇತರರು ತೀರ್ಥ ಪ್ರಸಾದ ಸ್ವೀಕರಿಸಿದರು. ಸರ್ವ ಭಕ್ತರು ರಾಘವೇಂದ್ರ ರಾಯರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನ ಅನ್ನದಾನದಲ್ಲಿ 2500ಕ್ಕೂ ಹೆಚ್ಚು ಭಕ್ತರು ಭಾಗವಹಿಸಿ ರುಚಿಕರವಾದ 6 ಬಗೆಯ ರಾಯರ ಪ್ರಸಾದವನ್ನು ಸ್ವೀಕರಿಸಿದರು ಕುಟುಂಬ ಪರಿವಾರ ಸಮೇತವಾಗಿ ಮಂದಹಾಸದಿಂದ ಸಂಜೆ ದೀಪೋತ್ಸವ ಕಾರ್ಯಕ್ರಮಕ್ಕೆ ಭಾರತೀಯರ ಉಡುಪು ಧರಿಸಿ ಬಂದ ಸರ್ವ ಭಕ್ತರು ರಾಯರ ಆರಾಧನೆಯನ್ನು ಸಂಭ್ರಮದಿಂದ ಆಚರಿಸಿದರು.
