ಚನ್ನರಾಯಪಟ್ಟಣ: ಜನನಿ ಸೇವಾ ಫೌಂಡೇಶನ್ ವತಿಯಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಐಡಿ ಕಾರ್ಡ್ ಹಾಗೂ ಪೆನ್ನು ಮತ್ತು ಪುಸ್ತಕಗಳನ್ನು ವಿತರಣೆ ಮಾಡಲಾಯಿತು.
ಜನನಿ ಸೇವಾ ಫೌಂಡೇಶನ್ ಅಧ್ಯಕ್ಷರಾದ ಆರ್ ಮಂಜುನಾಥ್ ಮತ್ತು ಆರಕ್ಷಕ ಉಪನಿರೀಕ್ಷಕರಾದ ರವಿರವರು ಹಾಗೂ ಜನನಿ ಸೇವಾ ಫೌಂಡೇಶನ್ ಸರ್ವ ಪದಾಧಿಕಾರಿಗಳ ನೇತೃತ್ವದಲ್ಲಿ ಪಟ್ಟಣದ ಹೌಸಿಂಗ್ ಬೋರ್ಡ್ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಗುರುತಿನ ಚೀಟಿ ಹಾಗೂ ಪೆನ್ನು ಪುಸ್ತಕಗಳನ್ನು ನೀಡುವ ಮೂಲಕ ಸಮಾಜಮುಖಿ ಕೆಲಸವನ್ನು ಮಾಡಿದರು.

ಆರ್ ಮಂಜುನಾಥ್ ಮಾತನಾಡಿ ನಮ್ಮ ಸಂಸ್ಥೆ ವತಿಯಿಂದ ಪ್ರತಿ ತಿಂಗಳು ಒಂದೊಂದು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪೆನ್ನು ಪುಸ್ತಕಗಳನ್ನು ಹಾಗೂ ಐಡಿ ಕಾರ್ಡ್ಗಳನ್ನು ವಿತರಣೆ ಮಾಡುತ್ತಾ ಬರುತ್ತಿದ್ದೇವೆ ಎಂದರು. ಎಸ್ಐ ರವಿ ಮಾತನಾಡಿ ಸರ್ಕಾರಿ ಶಾಲೆಗಳ ಉಳಿಸುವ ದೃಷ್ಟಿಯಿಂದ ಜನನಿ ಸೇವಾ ಫೌಂಡೇಶನ್ ಪದಾಧಿಕಾರಿಗಳ ಸಮಾಜಮುಖಿ ಕೆಲಸ ಕೆಲಸಗಳನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರವಿ,ಜನನಿ ಸೇವಾ ಫೌಂಡೇಶನ್ ನ ಅಧ್ಯಕ್ಷರಾದ ಕುರುವಂಕ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಉಪಾಧ್ಯಕ್ಷರಾದ ರುದ್ರೇಶ್ ಬಾಲಚಂದ್ರ, ಖಜಾಂಚಿ ವಿನೋದ್, ಸಹ ಕಾರ್ಯದರ್ಶಿಗಳಾದ ರಮೇಶ್, ಬಿ ವಿ ಅಶ್ವಿನಿ, ಕಿಶೋರ್, ಸಿ ಎನ್ ಮಂಜುನಾಥ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಹಾಸ್ಮ, ಸರ್ಕಾರಿ ಶಾಲೆಯ ಶಿಕ್ಷಕರುಗಳಾದ ದೇವರಾವ್, ಸುನಂದಮ್ಮ, ದಮಯಂತಿ, ಸೇರಿದಂತೆ ಇತರರು ಹಾಜರಿದ್ದರು.
-ಮಂಜುನಾಥ್ ಐ ಕೆ
