ಚನ್ನರಾಯಪಟ್ಟಣದ – ಗಾಂಧಿ ಸರ್ಕಲ್ ನಲ್ಲಿರುವ ರಾಯರ ರಂಗಮಂದಿರದಲ್ಲಿ ಮಂತ್ರಾಲಯದ ಪೀಠಾಧಿಪತಿಗಳವರ ಆಶೀರ್ವಾದದಿಂದ ಕಾಮದೇನುವಿಗೆ ಶಾಸ್ತ್ರೋಕ್ತವಾಗಿ ಪೂಜೆಯೊಂದಿಗೆ ಕಾಲಿಗೆ ಗೆಜ್ಜೆ ಕಟ್ಟಿ ವಸ್ತ್ರ ತೊಡಿಸಿ ಶೃಂಗಾರ ಗೊಳಿಸಿ ರಾಧೆ ಎಂಬ ಹೆಸರನ್ನು ಇಟ್ಟು ಸಾಂಪ್ರದಾಯಿಕ ನಾಮಕರಣವನ್ನು ಮಾಡಲಾಯಿತು.
. ಹಿಂದೂ ಧರ್ಮದಲ್ಲಿ, ಕಾಮಧೇನು ಒಂದು ಕಾಲ್ಪನಿಕ ಹಸು, ಅದು ತನ್ನ ಭಕ್ತರ ಎಲ್ಲಾ ಆಸೆಗಳನ್ನು ಈಡೇರಿಸುತ್ತದೆ ಎಂದು ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇದು ವಸಿಷ್ಠ ಋಷಿಗಳವರ ಆಶ್ರಮದಲ್ಲಿ ತನ್ನ ಹಾಲಿನಿಂದ ಎಲ್ಲರನ್ನೂ ಸಂತೋಷಪಡಿಸುತ್ತಿತ್ತು
ಕಾಮಧೇನು ಬೇಡಿದ ವರಗಳನ್ನು ನೀಡುವ ಹಸು ಎಂದು ಪರಿಗಣಿಸಲಾಗುತಾರೆ ಕಾಮಧೇನು ಮಂದಿರ ಮತ್ತು ದೇವಾಲಯಗಳಲ್ಲಿ ಇಟ್ಟುಕೊಳ್ಳುವುದು ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.
ಗೋವುಗಳನ್ನು ಪೂಜಿಸಲಾಗುತ್ತದೆ ಮತ್ತು ಅವುಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅದರಿಂದ ಭಕ್ತರಿಗೆ ಅನುಕೂಲವಾಗುವಂತೆ ರಾಯರ ರಂಗಮಂದಿರಕ್ಕೆ ಹಸುಗಳಿಗೆಲ್ಲ ತಾಯಿ ಒಂದು ಪ್ರಾಮುಖ್ಯತೆಯನ್ನು ಹೊಂದಿರುವ ಪುಂಗನೂರು ಗೋಮಾತೆಯನ್ನು ತಂದು ನಾಮಕರಣ ಮಾಡಲಾಗಿದೆ ಇದೇ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಭಕ್ತಾದಿಗಳು ಭಗವಂತನ ಆಶೀರ್ವಾದಕ್ಕೆ ಪಾತ್ರರಾದರು.
- ಮಂಜುನಾಥ ಐ ಕೆ
