ಚನ್ನರಾಯಪಟ್ಟಣ: ಮೇಗಲಕೆರೆ ಮೋಹನ್ ಕುಮಾರ್ ರವರು ತಮ್ಮ ಮೇಲಿರುವ ವಿವಿಧ ಕೇಸುಗಳನ್ನು ರದ್ದು ಮಾಡಿಸಿಕೊಳ್ಳುವ ದುರುದ್ದೇಶದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಹೊರತು ಜೆಡಿಎಸ್ ಪಕ್ಷವನ್ನು ಬಲಪಡಿಸುವ ದೃಷ್ಟಿಯಿಂದ ಅಲ್ಲ ಎಂದು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಜಿ ಕೆ ಮಂಜುನಾಥ್ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಾಗಸಮುದ್ರ ಬಾಲು ಮಾತನಾಡಿ ಮೋಹನ್ ಕುಮಾರ್ ಅವರು ಹಲವಾರು ಮಂದಿ ಬಡವರಿಗೆ ಮೋಸ ಮಾಡಿದ್ದಾರೆ. ಇವರ ವಿರುದ್ಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ, ಈ ದೂರುಗಳನ್ನು ರದ್ದು ಮಾಡಿಸಿಕೊಳ್ಳುವ ಉದ್ದೇಶದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ, ಮಾನ್ಯ ಶಾಸಕರು ಈ ತಾಲೂಕಿನಲ್ಲಿ ವಂಚನೆಗೆ ಒಳಗಾಗಿರುವ ಸಾರ್ವಜನಿಕರ ಪರವಾಗಿ ನಿಂತು ನ್ಯಾಯ ಕೊಡಿಸುತ್ತಾರೋ ಇಲ್ಲವೇ ಕೂಲಿ ಕಾರ್ಮಿಕರಿಗೆ ವಂಚನೆ ಮಾಡಿರುವ ವ್ಯಕ್ತಿಯನ್ನು ರಕ್ಷಣೆ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ ಎಂದರು.
ಈ ಮೋಹನ್ ಕುಮಾರ್ ಎಂಬ ವ್ಯಕ್ತಿಯು ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿಲ್ಲ, ಇಂತಹ ವ್ಯಕ್ತಿಯು ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡರ ಬಗ್ಗೆ ಮಾತನಾಡುವ ನೈತಿಕತೆಯನ್ನು ಹೊಂದಿಲ್ಲ ಎಂದರು. ಮೇಘನಕೇರಿ ರವಿ ಮಾತನಾಡಿ ಈ ಮೋಹನ್ ಕುಮಾರ್ ಎಂಬ ವ್ಯಕ್ತಿಯು ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ನಾಲ್ಕನೇ ಸ್ಥಾನಕ್ಕೆ ನೂಕಲು ಪಟ್ಟಿದ್ದಾನೆ, ಇಂತಹ ವ್ಯಕ್ತಿಯಿಂದ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ಉಪಯೋಗವಿಲ್ಲ ಎಂದರು, ಕಾಂಗ್ರೆಸ್ ಪಕ್ಷದಿಂದ ಎಲ್ಲಾ ರೀತಿಯ ಅಧಿಕಾರವನ್ನು ಪಡೆದು ಇವಾಗ ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುವ ಈ ವ್ಯಕ್ತಿಗೆ ಮಾತಿಗೆ ಯಾರು ಮನೆ ನೀಡಬಾರದು ಎಂದು ತಿಳಿಸಿದರು.
ಸಂದರ್ಭದಲ್ಲಿ ಕೆಡಿಪಿ ಸದಸ್ಯರಾದ ಕಬ್ಬಾಳು ಮಹೇಶ್, ತಾಲೂಕು ಆರೋಗ್ಯ ರಕ್ಷಾ ಸಮಿತಿಯ ನಿರ್ದೇಶಕರುಗಳಾದ ಕಲ್ಕೆರೆ ಮೋಹನ್, ಜಿ ಕೆ ಮಂಜುನಾಥ್, ನಾಗಸಮುದ್ರ ಬಾಲು, ಪುರಸಭಾ ನಾಮ ನಿರ್ದೇಶನ ಸದಸ್ಯರಾದ ಮೇಘಲಕೇರಿ ರವಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ರಾಕೇಶ್, ಸೇರಿದಂತೆ ಇತರರು ಹಾಜರಿದ್ದರು.
ವರದಿ : ಐ ಕೆ ಮಂಜುನಾಥ್
