ಚನ್ನರಾಯಪಟ್ಟಣ: ಬಳುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದಲ್ಲಿ ಹೊಸ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಿ.ಎಸ್. ಸ್ವಾಮಿ ಅವರು ನೂತನ ಅಧ್ಯಕ್ಷರಾಗಿ ಹಾಗೂ ಬಿ.ಟಿ. ವಸಂತ್ ಕುಮಾರ್ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಎಚ್.ಡಿ.ಸಿ.ಸಿ. ಬ್ಯಾಂಕ್ನ ವಿಸ್ತರಣಾಧಿಕಾರಿ ಅಭಿಲಾಶ್ ಸೇರಿದಂತೆ ಸಂಘದ ಹಲವು ನಿರ್ದೇಶಕರು ಉಪಸ್ಥಿತರಿದ್ದರು.
ಇದನ್ನು ಓದಿ: ಚನ್ನರಾಯಪಟ್ಟಣ: ಪಿಎಸ್ಐ ಮಲ್ಲಪ್ಪನ ವಿರುದ್ದ ಕ್ರಮಕ್ಕೆ ಭರವಸೆ — ದಲಿತಪರ ಸಂಘಟನೆಗಳ ಪ್ರತಿಭಟನೆ ಹಿಂತೆಗೆತ
ಅವರುಗಳಲ್ಲಿ ಬಿ.ಆರ್. ಮಂಜೇಗೌಡ, ಸಿ.ಡಿ. ದೇವೇಗೌಡ, ಬಿ.ಟಿ. ರಾಮಕೃಷ್ಣ, ಬಿ.ಎಂ. ಯೋಗಾನಂದ, ಶ್ರೀಮತಿ ರಾಧಾ, ಶ್ರೀಮತಿ ಸಿ.ಎನ್. ತನುಜಾ, ರಂಗಸ್ವಾಮಿ, ಬಿ.ಕೆ. ನಂಜಪ್ಪ, ಶ್ರೀಮತಿ ಸಾಕಮ್ಮ, ವೆಂಕಟೇಶ್ ಮೊದಲಾದವರಿದ್ದರು.
ಹೊಸದಾಗಿ ಆಯ್ಕೆಯಾದ ಆಡಳಿತ ಮಂಡಳಿಯು ಸಂಘದ ಅಭಿವೃದ್ಧಿ, ಸದಸ್ಯರ ಹಿತಾಸಕ್ತಿ ಮತ್ತು ಕೃಷಿ ಕ್ಷೇತ್ರದ ಬಲವರ್ಧನೆಗೆ ಆದ್ಯತೆ ನೀಡುವುದಾಗಿ ತಿಳಿಸಿದೆ.


– ಮಂಜುನಾಥ್ ಐ. ಕೆ.
