ಚನ್ನರಾಯಪಟ್ಟಣ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾದ ಶೆಟ್ಟಹಳ್ಳಿ ದಯಾನಂದ ಹಾಗೂ ಅವರ ಪತ್ನಿ ಶ್ರೀಮತಿ ಪವಿತ್ರ ದಂಪತಿಗಳನ್ನು ಪಟ್ಟಣದ ಗಾಂಧಿ ವೃತ್ತದಲ್ಲಿರುವ ರಾಯರ ರಂಗಮಂದಿರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ರಾಯರ ರಂಗಮಂದಿರದ ಮುಖ್ಯಸ್ಥರಾದ ಎಂ.ಕೆ. ಪ್ರಕಾಶ್ ಅವರ ನೇತೃತ್ವದಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ವೇಳೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ದಯಾನಂದ್ ಅವರೊಂದಿಗೆ ಹಿರಿಯ ಪತ್ರಕರ್ತರು ಹಾಗೂ ನೂತನ ನಿರ್ದೇಶಕರಾದ ಎ.ಎಂ. ಜಯರಾಮ್ ಮತ್ತು ಪಾಂಡುರಂಗ ಅವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಯರ ರಂಗಮಂದಿರದ ಅಧ್ಯಕ್ಷರಾದ ಕೆ.ಆರ್. ಅನಿತಾ, ಕಾರ್ಯದರ್ಶಿ ಸ್ವಾತಿ ಪಿ. ಭಾರದ್ವಾಜ್ ಹಾಗೂ ಎಂ.ಕೆ. ಪ್ರಕಾಶ್ ಉಪಸ್ಥಿತರಿದ್ದು, ಪತ್ರಕರ್ತರ ಸೇವೆ ಮತ್ತು ಸಮಾಜದ ಮೇಲಿನ ಅವರ ಕೊಡುಗೆಯನ್ನು ಶ್ಲಾಘಿಸಿದರು.
ಪತ್ರಕರ್ತರು ಸಮಾಜ ಮತ್ತು ಆಡಳಿತದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಜವಾಬ್ದಾರಿಯುತ ವರದಿಗಾರಿಕೆ ಸಮಾಜದ ಪ್ರಗತಿಗೆ ಅಗತ್ಯವಿದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು.
– ಮಂಜುನಾಥ್ ಐ .ಕೆ
