ಚನ್ನರಾಯಪಟ್ಟಣ ಪಟ್ಟಣದ ಭೂಮಿ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಮಡಬಕೊಪ್ಪಲು ಗ್ರಾಮದ ಶಂಕರಲಿಂಗೇಗೌಡ ಅವರನ್ನು ಏಕಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಂಕರಲಿಂಗೇಗೌಡ ಅವರು, “ಸಂಘದಲ್ಲಿ ಒಟ್ಟು 59 ಮಂದಿ ಸದಸ್ಯರಿದ್ದಾರೆ. ಎಲ್ಲರ ಸಲಹೆ ಮತ್ತು ಸಹಕಾರವನ್ನು ಪಡೆದು ಸಂಘದ ಅಭಿವೃದ್ಧಿ ಮತ್ತು ಏಳಿಗೆಗಾಗಿ ಶ್ರಮಿಸುತ್ತೇನೆ” ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಹಾಲೋಬ್ರಿಕ್ ಮಂಜಣ್ಣ, ನಿಕಟ ಪೂರ್ವ ಅಧ್ಯಕ್ಷ ರಮೇಶ್, ಮಾಜಿ ಕಾರ್ಯದರ್ಶಿ ಸಿ.ಜಿ. ಸೋಮಶೇಖರ್ ಸೇರಿದಂತೆ ಸಂಘದ ಸರ್ವ ಸದಸ್ಯರು ಹಾಜರಿದ್ದರು.
