ಚನ್ನರಾಯಪಟ್ಟಣ: ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗಿರುವ ನ್ಯೂ ಸ್ಪರ್ಶ ಲೈಫ್ ಲೈನ್ ಹಾಸ್ಪಿಟಲ್ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ಅಕ್ಟೋಬರ್ 13 ರಂದು ಉದ್ಘಾಟನೆಗೊಳ್ಳಲಿದೆ ಎಂದು ತಜ್ಞ ವೈದ್ಯ ಡಾ. ಲೋಕೇಶ್ ಬಿ.ಎಸ್. ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರು ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಆಸ್ಪತ್ರೆಯು ಈಗ 100 ಹಾಸಿಗೆಗಳ ಸಾಮರ್ಥ್ಯದೊಂದಿಗೆ ಮತ್ತು ಆಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ಒಳಗೊಂಡಿದೆ. ಕೊರೋನಾ ಕಾಯಿಲೆಯ ಸಂದರ್ಭದಲ್ಲಿ ತಮ್ಮ ಆಸ್ಪತ್ರೆಯು 500ಕ್ಕೂ ಹೆಚ್ಚು ರೋಗಿಗಳ ಜೀವ ಉಳಿಸುವ ಕಾರ್ಯ ಮಾಡಿರುವುದನ್ನು ಡಾ. ಲೋಕೇಶ್ ಸ್ಮರಿಸಿದರು.
ಈ ಸಂದರ್ಭದಲ್ಲಿ ಡಾ. ಪ್ರವೀಣ್ ಮತ್ತು ಡಾ. ಶಹಬಾದ್ ಬೇಗ್ ಮಾತನಾಡಿದರು. ನ್ಯೂ ಸ್ಪರ್ಶ ಲೈಫ್ ಲೈನ್ ಹಾಸ್ಪಿಟಲ್ ವತಿಯಿಂದ ಸದ್ಯದಲ್ಲೇ ನರ್ಸಿಂಗ್ ಶಾಲೆಯನ್ನು ಕೂಡ ತೆರೆಯುವ ಮಹತ್ವದ ಯೋಜನೆಯನ್ನು ಪ್ರಕಟಿಸಿದರು. ಈ ಹೊಸ ಹೆಜ್ಜೆಯು ಸ್ಥಳೀಯ ಆರೋಗ್ಯ ಸೇವೆ ಮತ್ತು ಉದ್ಯೋಗ ಅವಕಾಶಗಳಿಗೆ ಉತ್ತೇಜನ ನೀಡಲಿದೆ ಎಂದರು.
ವರದಿ : ಐ ಕೆ ಮಂಜುನಾಥ್
