ಚನ್ನರಾಯಪಟ್ಟಣ: ನೂತನ ತಂತ್ರಜ್ಞಾನಗಳ ಅಳವಡಿಕೆಯಿಂದ ದಸ್ತಾವೇಜು ಬರವಣಿಗೆಯಲ್ಲಿ ತೊಡಗಿರುವ ಪತ್ರಬರಹಗಾರರಿಗೆ ಉದ್ಯೋಗ ಅಭದ್ರತೆ ಉಂಟಾಗುತ್ತಿದೆ ಎಂದು ತಾಲ್ಲೂಕು ಪತ್ರಬರಹಗಾರರ ಸಂಘದ ಸದಸ್ಯ ಗುಣಶೇಖರ್ ವಿಷಾದ ವ್ಯಕ್ತಪಡಿಸಿದರು.
ಚನ್ನರಾಯಪಟ್ಟಣ ತಾಲ್ಲೂಕಿನ ಎಲ್ಲಾ ಪತ್ರಬರಹಗಾರರು ದಸ್ತಾವೇಜು ಕೆಲಸವನ್ನು ಸ್ಥಗಿತಗೊಳಿಸಿ ಮೌನ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಮಾತನಾಡಿದ ಅವರು, ವರ್ಷಗಳಿಂದ ದಸ್ತಾವೇಜು ಬರವಣಿಗೆಯನ್ನು ವೃತ್ತಿಯಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಲಕ್ಷಾಂತರ ಜನರ ಬದುಕನ್ನು ನೂತನ ತಂತ್ರಜ್ಞಾನ ಕಸಿದುಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಹೇಳಿದರು.

ನಾವು ನೂತನ ತಂತ್ರಜ್ಞಾನ ಅಳವಡಿಕೆಗೆ ವಿರೋಧಿಗಳಲ್ಲ. ಆದರೆ ಪೇಪರ್ಲೆಸ್, ಪೇಸ್ಲೆಸ್ ಮಾದರಿಯನ್ನು ಸಂಪೂರ್ಣವಾಗಿ ಜಾರಿಗೊಳಿಸದೇ, ಯಥಾಸ್ಥಿತಿಯಲ್ಲಿ ನೋಂದಣಿ ಪ್ರಕ್ರಿಯೆ ಮುಂದುವರಿಸಿ ಎಲ್ಲಾ ಪತ್ರಬರಹಗಾರರಿಗೆ ಉದ್ಯೋಗ ಭದ್ರತೆ ಒದಗಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಒತ್ತಾಯಿಸಿದರು.
ಇದನ್ನು ಓದಿ: ಚನ್ನರಾಯಪಟ್ಟಣ : ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರ ಒಕ್ಕೂಟದ ವತಿಯಿಂದ ಪ್ರತಿಭಟನೆ..!
ಕಾವೇರಿ–1, ಕಾವೇರಿ–2, ಕಾವೇರಿ–3 ನಂತಹ ತಂತ್ರಜ್ಞಾನಗಳನ್ನು ಅಳವಡಿಸುವ ಮೂಲಕ ನಮ್ಮನ್ನು ನಿರುದ್ಯೋಗಿಗಳಾಗಿಸಬಾರದು. ಕಾವೇರಿ–3 ತಂತ್ರಜ್ಞಾನ ಜಾರಿಗೆ ತಂದರೂ, ಇತರ ರಾಜ್ಯಗಳಲ್ಲಿ ಅನುಸರಿಸುತ್ತಿರುವಂತೆ ಪತ್ರಬರಹಗಾರರಿಗೆ ಪ್ರತ್ಯೇಕ ಐಡಿ ವ್ಯವಸ್ಥೆ ಜಾರಿಗೊಳಿಸಿದರೆ ಉದ್ಯೋಗ ಅಭದ್ರತೆಯನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಮೌನ ಪ್ರತಿಭಟನೆಯಲ್ಲಿ ಪತ್ರಬರಹಗಾರರಾದ ಕೇಶವಮೂರ್ತಿ, ಆನಂದ್, ಹರೀಶ್, ಸುಬ್ರಹ್ಮಣ್ಯ, ಗುರುರಾಜ್ ಸೇರಿದಂತೆ ಇತರರು ಹಾಜರಿದ್ದು, ಸರ್ಕಾರ ತಕ್ಷಣ ಈ ವಿಷಯದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
– ಮಂಜುನಾಥ್ ಐ.ಕೆ

[…] ಇದನ್ನು ಓದು: Watch Video- ಚನ್ನರಾಯಪಟ್ಟಣ: ನೂತನ ತಂತ್ರಜ್ಞಾನದಿ… […]
[…] ಇದನ್ನು ಓದಿ: ಚನ್ನರಾಯಪಟ್ಟಣ: ನೂತನ ತಂತ್ರಜ್ಞಾನದಿಂದ ಪತ… […]