ಚನ್ನರಾಯಪಟ್ಟಣ: ಮೇಘಲಕೇರಿ ಸರ್ಕಾರಿ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ನವಂಬರ್ ತಿಂಗಳ ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ವೈವಿಧ್ಯಮಯ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆಯಾಯಿತು.
ಈ ಸಂದರ್ಭದಲ್ಲಿ ಪಿ.ಎಂ. ಶ್ರೀ ಸರ್ಕಾರಿ ಶಾಲೆಯ ವಿಧ್ಯಾರ್ಥಿನಿ ನಿಹಾರಿಕಾ, ಕನ್ನಡ ದಿನಪತ್ರಿಕೆಯನ್ನು ಬಳಸಿ ನಿರ್ಮಿಸಿದ ಅನನ್ಯ ಛದ್ಮವೇಷ ಧರಿಸಿ ವೇದಿಕೆಗೆ ಬಂದಾಗ ಪ್ರೇಕ್ಷಕರ ಗಮನ ಸೆಳೆದರು. ಅವರ ಈ ಸೃಜನಾತ್ಮಕ ಕನ್ನಡ ಪರ ಉಡುಗೆ ಎಲ್ಲರನ್ನೂ ಮೆಚ್ಚುವಂತೆ ಮಾಡಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ದೀಪ, ಯೋಗಗುರು ರೇಖಾರಾಣಿ ಸೇರಿದಂತೆ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪಾಲಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳ ಪ್ರತಿಭೆ, ಕಲಾತ್ಮಕತೆ ಮತ್ತು ಕನ್ನಡ ಪ್ರೇಮ ಮೆರೆಯುವಂತಹ ಈ ಕಾರ್ಯಕ್ರಮ ಶಾಲಾ ಸಮುದಾಯದಲ್ಲಿ ಉತ್ಸಾಹಭರಿತ ವಾತಾವರಣ ಮೂಡಿಸಿತು.
– ಮಂಜುನಾಥ್ ಐ.ಕೆ.
