ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಜುಟ್ಟನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪಿ ಕೆ ನಾಗರಾಜ್ ಹಾಗೂ ಉಪಾಧ್ಯಕ್ಷರಾಗಿ ಮಂಜಪ್ಪ ಅವಿರೋಧವಾಗಿ ಆಯ್ಕೆಗೊಂಡರು.
ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಪಿಕೆ ನಾಗರಾಜು ಮತ್ತು ಉಪಾಧ್ಯಕ್ಷರಾದ ಮಂಜಪ್ಪನವರನ್ನು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸಿ ಎನ್ ಬಾಲಕೃಷ್ಣ ಸನ್ಮಾನಿಸಿ ಗೌರವಿಸಿದರು.

ಶಾಸಕ ಬಾಲಣ್ಣ ಮಾತನಾಡಿ ನೂತನ ಅಧ್ಯಕ್ಷರು ಎಲ್ಲಾ ಸದಸ್ಯರ ಸಲಹೆ ಸಾಕಾರ ಪಡೆದು ಸೊಸೈಟಿಯನ್ನು ಅಭಿವೃದ್ಧಿಯತ್ತ ಕೊಂಡಯ್ಯಬೇಕು ಎಂದರು, ಈ ಭಾಗದ ರೈತರಿಗೆ ಸಾಲ ಸೌಲಭ್ಯವನ್ನು ನೀಡುವ ಮೂಲಕ ರೈತರ ಏಳಿಗೆಗೆ ಶ್ರಮಿಸಬೇಕು ಹಾಗೂ ಈ ಸೊಸೈಟಿಯ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಪಿ ಕೆ ನಾಗರಾಜ್, ಉಪಾಧ್ಯಕ್ಷರಾದ ಮಂಜಪ್ಪ, ನಿರ್ದೇಶಕರುಗಳಾದ ಡಿ ಎನ್ ಬಸವರಾಜ್, ಪ್ರಭು, ನಿಖಿಲ್ ಬೋರೆಗೌಡ, ಸ್ನೇಹಜೀವಿ ಮಂಜು, ಗಣೇಶ್, ಕೃಷ್ಣೆಗೌಡ, ಸ್ವಾಮಿ, ಶ್ರೀಮತಿ ಶಶಿಕಲಾ ಮಲ್ಲೇಶ್, ಶ್ರೀಮತಿ ಶಾಂತಾ ಪುಟ್ಟಸ್ವಾಮಿ, ರಾಜಶೇಖರ್, ವಿಸ್ತರಣಾಧಿಕಾರಿಗಳಾದ ಮಧು, ಸೊಸೈಟಿಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್, ಜೆಡಿಎಸ್ ಮುಖಂಡ ಪರಮ ದೇವರಾಜೇಗೌಡ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರುಗಳಾದ ಪಿ ಕೆ ಮಂಜೇಗೌಡ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಪಿ ಬಿ ಬೋರೇಗೌಡ, ದೊಡ್ಡೇಗೌಡ, ಎಂಪಿ ಪ್ರಸನ್ನಕುಮಾರ,ಜೆಡಿಎಸ್ ಮುಖಂಡರುಗಳಾದ ಡಿ ಸಿ ರಂಗೇಗೌಡ ,ಶ್ರೀನಿವಾಸ್, ದೇವರಾಜ್, ದಾಸರಹಳ್ಳಿ ರಂಗೇಗೌಡ,ಮಂಜಪ್ಪ, ವಾಸು, ರಮೇಶ್, ಪರಮ ನಾಗೇಶ್, ಪ್ರಭಾಕರ, ಧರಣೇಶ್, ಬಿಸಿ ನಂಜೇಗೌಡ, ಸುನಿಲ್,ನಾಗೇಶ್, ಸೇರಿದಂತೆ ಇತರರು ಹಾಜರಿದ್ದರು.
ವರದಿ : ಐ ಕೆ ಮಂಜುನಾಥ್
