Oplus_16908288
ಚನ್ನರಾಯಪಟ್ಟಣ: ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಶನ್ ಹಾಗೂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಪ್ರವಾದಿ ಮೊಹಮ್ಮದ್ ಸಲ್ಲಲ್ಲಾ ಸಲ್ಲಂ ರವರ 1500ನೇ ಜನ್ಮದಿನ ಹಾಗೂ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ರವರ 138ನೇ ಜಯಂತಿಯನ್ನು ಭಾನುವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ನಡೆಸಲಾಗಿದ್ದು, ಆಸ್ಪತ್ರೆ ಆಡಳಿತಾಧಿಕಾರಿ ಡಾ. ಯುವರಾಜ್ ಅಧ್ಯಕ್ಷತೆ ವಹಿಸಿದರು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ, ಫೌಂಡೇಶನ್ ನಿರ್ದೇಶಕ ಶಮಿಲ್ ಪಾಷಾ ಸ್ವಾಗತಿಸಿದರು.
ಡಾ. ಅಬ್ದುಲ್ ಕಲಾಂ ಫೌಂಡೇಶನ್ ಅಧ್ಯಕ್ಷ ಟಿ. ಮುನಾವರ್ ಪಾಷಾ ಮಾತನಾಡಿ, “ಪ್ರವಾದಿ ಮೊಹಮ್ಮದ್ ರವರು ವಿಶ್ವಕ್ಕೆ ಶಾಂತಿ, ಸೌಹಾರ್ದತೆ ಮತ್ತು ಮಾನವೀಯತೆಯ ಮಾದರಿಯಾಗಿದ್ದಾರೆ. ಅಲ್ಲಾ ಅನುಗ್ರಹದಿಂದ ಅವರ ಸಂದೇಶವು ವಿಶ್ವಾದ್ಯಂತ ಹರಡಿದೆ” ಎಂದು ಹೇಳಿದರು. ಹಾಗೆಯೇ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಸೇವಾ ಮನೋಭಾವವನ್ನು ಸ್ಮರಿಸಿ ಮಾತನಾಡಿದರು.

ಡಾ. ಯುವರಾಜ್ ಅವರು ಮಾತನಾಡಿ, “ಪ್ರವಾದಿ ಪೈಗಂಬರ್ ಹಾಗೂ ಡಾ. ರಾಧಾಕೃಷ್ಣನ್ ಅವರ ಆದರ್ಶ ಗುಣಗಳನ್ನು ನಾವು ಮೈಗೂಡಿಸಿಕೊಂಡು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಬೇಕು” ಎಂದು ಕರೆ ನೀಡಿದರು.
ಕಾರ್ಯದರ್ಶಿ ಜಬಿವುಲ್ಲಾ ಬೇಗ್ ಅವರು ಮಾತನಾಡಿ, “ಮಹಮ್ಮದ್ ಪೈಗಂಬರ್ ಹಾಗೂ ಡಾ. ರಾಧಾಕೃಷ್ಣನ್ ಮಹಾನ್ ಚೇತನರು. ಇವರ ಜೀವನವೇ ಮಾನವಕುಲಕ್ಕೆ ದಾರಿದೀಪವಾಗಿದೆ” ಎಂದು ಹೇಳಿದರು.
ಹಿರಿಯ ಸಿಬ್ಬಂದಿ ಗುರುಮೂರ್ತಿ ಕಾರ್ಯಕ್ರಮ ನಿರೂಪಣೆ ಮಾಡಿದರು. ನಿರ್ದೇಶಕ ಜಾವೀದ್ ಪಾಷಾ ವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅಮ್ಜದ್ ಖಾನ್, ಚಾಂದ್ ಪಾಶ, ಪುರಸಭಾ ಸದಸ್ಯರಾದ ಅನ್ಸರ್ ಪಾಷಾ, ಜಮೀಲ್ ಪಾಷಾ, ಸುಹೀಲ್ ಪಾಷಾ, ಹಮೀದ್ ಖಾನ್, ಸೈಯದ್ ಅಫ್ಸರ್ ಪಾಷಾ, ತನ್ಜಿಮ್ ಪಾಷಾ, ಮುಹಿದ್ ಖಾನ್ ಸೇರಿದಂತೆ ಎಲ್ಲಾ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
