Oplus_16908288
ಚನ್ನರಾಯಪಟ್ಟಣ: ನವೋದಯ ವಿದ್ಯಾ ಸಂಸ್ಥೆಯ 2026-2027ನೇ ಸಾಲಿನಿಂದ ಎಲ್ ಕೆಜಿ ಹಾಗೂ ಯುಕೆಜಿ ಇಂಗ್ಲಿಷ್ ಮಾಧ್ಯಮ ಪ್ರಾರಂಭ ಮಾಡಲಾಗುವುದು ಎಂದು ನವೋದಯ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಸಿಜೆ ಮಂಜುನಾಥ್ ಮಾಹಿತಿ ನೀಡಿದರು.
ಪಟ್ಟಣದ ನವೋದಯ ವಿದ್ಯಾ ಸಂಸ್ಥೆ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸ್ವತಂತ್ರ ಪೂರ್ವ ವಿದ್ಯಾ ಸಂಸ್ಥೆ ಆದ ನವೋದಯ ವಿದ್ಯಾ ಸಂಸ್ಥೆಯು ನಾಲ್ಕು ಜನ ಶಿಕ್ಷಣ ದಿಗ್ಗಜರಿಂದ ಹಾಸನ ಜಿಲ್ಲೆಯಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ನವೋದಯ ವಿದ್ಯಾ ಸಂಸ್ಥೆಯು ಇದುವರೆಗೂ ಹಾಸನ ಜಿಲ್ಲೆ ಮತ್ತು ಮಂಡ್ಯ ಜಿಲ್ಲೆಯ ಬಡ ರೈತಾಪಿ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವ ಮೂಲಕ ಶಿಕ್ಷಣ ದಾಸೋಹವನ್ನು ನೀಡುತ್ತಾ ಬಂದಿರುವುದು ತುಂಬಾ ಹೆಮ್ಮೆಯ ವಿಚಾರವಾಗಿದೆ. ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ನೂತನ ಆಡಳಿತ ಮಂಡಳಿಯು 2026 ಮತ್ತು 27ನೇ ಸಾಲಿನಲ್ಲಿ ಕನ್ನಡ ಮಾಧ್ಯಮದೊಂದಿಗೆ ಇಂಗ್ಲಿಷ್ ಮಾಧ್ಯಮವನ್ನು ಪ್ರಾರಂಭ ಮಾಡುತ್ತಿದ್ದು, ಇದರ ಉಪಯೋಗವನ್ನು ಚನ್ನರಾಯಪಟ್ಟಣ ತಾಲೂಕಿನ ಹಾಗೂ ಅಕ್ಕಪಕ್ಕ ತಾಲೂಕಿನ ಪೋಷಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ನಮ್ಮ ಶಾಲೆಯಲ್ಲಿ ನುರಿತ ಶಿಕ್ಷಕರಿದ್ದು, ಅತ್ಯುತ್ತಮವಾದ ಪ್ರಯೋಗ ಶಾಲೆ, ಗ್ರಂಥಾಲಯ, ಆಧುನಿಕ ಕ್ರೀಡಾ ಮೈದಾನ ಒಳಗೊಂಡಿದ್ದು, ಈ ಶಾಲೆಯು ತಾಲೂಕಿನ ಬಡವರ ಪಾಲಿನ ಆಪತ್ಬಾಂಧವನಾಗಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುತ್ತಾ ಬಂದಿದೆ. ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿರುವ ನವೋದಯ ವಿದ್ಯಾ ಸಂಸ್ಥೆಗೆ ಎಲ್ಲ ಪೋಷಕರು ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ನವೋದಯ ವಿದ್ಯಾ ಸಂಸ್ಥೆಯ ಗತವೈಭವವನ್ನು ಮರಳಲು ಸಹಕರಿಸಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ನವೋದಯ ವಿದ್ಯಾ ಸಂಸ್ಥೆ ಗೌರವ ಅಧ್ಯಕ್ಷರಾದ ಡಾ.ಶೇಷಶಯನ, ಅಧ್ಯಕ್ಷರಾದ ಮುರಾರ್ಜಿ ಮಂಜಣ್ಣ, ಕಾರ್ಯದರ್ಶಿ ಕೆಪಿ ಶರತ್, ನಿರ್ದೇಶಕರಾದ ಕಾಳೇನಹಳ್ಳಿ ಆನಂದ್ ಕುಮಾರ್, ಪ್ರಾಂಶುಪಾಲರಾದ ಸಂಜಯ್ ಕುಮಾರ್, ಉಪ ಪ್ರಾಂಶುಪಾಲರಾದ ಸ್ವಾಗತಹಳ್ಳಿ ಸುರೇಶ್, ಶಿಕ್ಷಕರು ಮತ್ತು ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.
ವರದಿ : ಮಂಜುನಾಥ್ ಐ ಕೆ
