ಚನ್ನರಾಯಪಟ್ಟಣ: ಪಿ ಎಮ್ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮ ನಡೆಯಿತು.
ಪಟ್ಟಣದ ನಗರ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಪಿ ಎಮ್ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಸ್ತೆ ಸುರಕ್ಷಾ ಸಪ್ತಾಹ ನಡೆಸಲಾಯಿತು. ಇತ್ತೀಚಿನ ದಿನಮಾನದಲ್ಲಿ ಜನಗಳ ಓಡಾಟ ವಾಹನಗಳ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಮಕ್ಕಳು ವಯೋವೃದ್ಧರು ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿರುವ ಕಾರಣ ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸುವುದು ಅದರ ಬಗ್ಗೆ ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯವಾಗಿರುತ್ತದೆ ಹಾಗೂ ವಾಹನ ಸವಾರರು ರಸ್ತೆಯ ನಿಯಮಗಳನ್ನ ಅರಿವಿಲ್ಲದೆ ವಾಹನಗಳನ್ನು ಚಲಾಯಿಸುವುದು ನಿಯಮಗಳ ಉಲ್ಲಂಘನೆ ಅಪಘಾತಕ್ಕೆ ಹೆಚ್ಚು ಕಾರಣವಾಗುತ್ತಿದೆ ಆದ್ದರಿಂದ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಹಾಗೂ ರಸ್ತೆಯ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಮುಖ್ಯವಾಗಿದೆ ಜನವರಿ ಒಂದರಿಂದ 30ರವರೆಗೆ ರಸ್ತೆ ಸುರಕ್ಷಾ ಸಪ್ತಹ ಕಾರ್ಯಕ್ರಮವಿದ್ದು ಆ ಮೂಲಕ ಶಾಲಾ ಮಟ್ಟದಲ್ಲಿ ಮಕ್ಕಳಿಗೆ ರಸ್ತೆ ನಿಯಮ ಪಾಲನೆ ಮತ್ತು ಸುರಕ್ಷತಾ ಕ್ರಮಗಳನ್ನು ಕಲಿಸುವುದು ತುಂಬಾ ಮುಖ್ಯವಾಗಿದೆ ಆದ್ದರಿಂದ ಜಾತಮೂಲಕ ನಮ್ಮ ಶಾಲೆಯ ಮಕ್ಕಳು ರಸ್ತೆ ಸುರಕ್ಷತಾ ಕ್ರಮದಲ್ಲಿ ಭಾಗವಹಿಸಿ ಚಾಲನೆ ನೀಡಲಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕ ಸುರೇಶ್ ಬಿ ಎನ್.ಅವರು ಹೇಳಿದರು.

ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಲ್ಲಪ್ಪ ಮಾತನಾಡಿ 18 ವರ್ಷ ಒಳಪಟ್ಟ ಮಕ್ಕಳು ವಾಹನವನ್ನು ಚಲಾಯಿಸಬಾರದು ಹಾಗೂ 18 ವರ್ಷಗಳ ಪಟ್ಟ ಮಕ್ಕಳಿಗೆ ಪೋಷಕರು ವಾಹನವನ್ನು ಚಲಾಯಿಸಲು ನೀಡಬಾರದು ಹಾಗೂ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನಗಳನ್ನು ಓಡಿಸಬಾರದು ಹೆಲ್ಮೆಟ್ಟನ್ನು ಸುರಕ್ಷತೆಗಾಗಿ ತಪ್ಪದೆ ಧರಿಸಿ ಪೊಲೀಸ್ ನವರು ನೋಡುತ್ತಾರೆ ಎಂಬ ಕಾರಣಕ್ಕೆ ಧರಿಸುವುದು ಬೇಡ ಎಂದು ಹೇಳಿದರು.
ಬಾಲ್ಯ ವಿವಾಹ ಪೋಕ್ಸೋ ಕಾಯ್ದೆ ಬಗ್ಗೆಯೂ ಕೂಡ ಮಕ್ಕಳಿಗೆ ತಿಳುವಳಿಕೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಪ್ರೇಮ, ರೇಖಾರಾಣಿ ಹಾಗೂ ಇತರ ಸಿಬ್ಬಂದಿಗಳು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ
