ಚನ್ನರಾಯಪಟ್ಟಣದ ಗ್ರಾಮೀಣ ಭಾಗದ ಬಾಲ ಪ್ರತಿಭೆ ಕು. ಹಿತಾನ್ಯ ಬಿ.ವೈ ಇತ್ತೀಚೆಗೆ ಗೋವಾದ ರವೀಂದ್ರ ಭವನದಲ್ಲಿ ನಡೆದ ರಾಷ್ಟ್ರೀಯ ಭರತನಾಟ್ಯ ಸ್ಪರ್ಧೆಯಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.
ಮೂರು ವರ್ಷಗಳಿಂದ ಚನ್ನರಾಯಪಟ್ಟಣದ ಹೆಸರಾಂತ ಶ್ರೀ ನಾಟ್ಯ ಭೈರವಿ ನೃತ್ಯಶಾಲೆಯಲ್ಲಿ ನಿರಂತರವಾಗಿ ತರಬೇತಿ ಪಡೆಯುತ್ತಿರುವ ಹಿತಾನ್ಯ, ನೂರಾರು ಪ್ರೇಕ್ಷಕರ ಮುಂದೆ ಶ್ರದ್ಧೆಯಿಂದ ನೃತ್ಯ ಪ್ರದರ್ಶನ ನೀಡಿ ಅಂತಿಮ ಸುತ್ತಿನವರೆಗೆ ತಲುಪಿದರು.
ಅವರ ವಿಶಿಷ್ಟ ಪ್ರದರ್ಶನವನ್ನು ಗುರುತಿಸಿ ಐ.ಟಿ.ಟಿ. ಸಂಸ್ಥೆಯವರು ಗ್ರಾಂಡ್ ಫಿನಾಲೆ ಅವಾರ್ಡ್ ನೀಡಿ ಗೌರವಿಸಿದರು. ಬಾಲ್ಯದಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದ ಹಿತಾನ್ಯ ಅವರನ್ನು ಗುರುತಿಸಿ ಶ್ರೀ ನಾಟ್ಯ ಭೈರವಿ ನೃತ್ಯಶಾಲೆ ಮತ್ತು ಶ್ರೀ ರಾಯರ ರಂಗ ಮಂದಿರ, ಗಾಂಧಿ ಸರ್ಕಲ್, ಚನ್ನರಾಯಪಟ್ಟಣದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಂ.ಕೆ. ಪ್ರಕಾಶ್, ಶ್ರೀಮತಿ ಅನಿತಾ, ಶ್ರೀಮತಿ ಸ್ವಾತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ
