ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಹೋಬಳಿ ಹಾಲು ಮತ್ತಿಘಟ್ಟ ಗ್ರಾಮದ ಹಿರಿಯ ಮತ್ತು ಯುವ ಮುಖಂಡರು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳನ್ನು ತೊರೆದು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರ್ಪಡೆಯಾದರು.
ನಟೇಶಣ್ಣ, ಪ್ರಫುಲ್, ಉಮೇಶ್, ಚಂದ್ರಶೇಖರ್, ಕಾರ್ತಿಕ್, ಗಿರೀಶ್, ರಮೇಶ್, ರಾಕೇಶ್, ಉದಯ್, ಮಂಜು, ಮಧು, ರವಿ, ಆದರ್ಶ, ದೊಡ್ಡೇಗೌಡ, ನಾಗೇಶ್, ಮಂಜೇಗೌಡ, ವಿನು ಮುಂತಾದ ಮುಖಂಡರು ಹಾಗೂ ಅಪಾರ ಸಂಖ್ಯೆಯ ಬೆಂಬಲಿಗರು ಬಿಜೆಪಿ ಮುಖಂಡ ಚಿದಾನಂದ್ ಸಿ.ಆರ್. ಅವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದಿದ್ದಾರೆ.

ಈ ಸೇರ್ಪಡೆ ಜಿಲ್ಲೆಯ ರಾಜಕೀಯ ವಲಯದಲ್ಲಿ ದೊಡ್ಡ ಪ್ರಭಾವ ಬೀರುತ್ತದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
– ಮಂಜುನಾಥ್ ಐ ಕೆ
