ಚನ್ನರಾಯಪಟ್ಟಣ: ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಚನ್ನರಾಯಪಟ್ಟಣದ ಶ್ರೀ ವಿವೇಕಾನಂದ ಅಂತರಾಷ್ಟ್ರೀಯ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಸಿದ್ದಾರ್ಥ್ ಎಂ. ಚಕ್ರವರ್ತಿ ಶ್ರೇಷ್ಠ ಸಾಧನೆ ಮಾಡಿದ್ದಾನೆ.
ಶ್ರೀಮತಿ ಎ.ವೈ. ಸರಿತ ಮತ್ತು ಪತ್ರಕರ್ತ ಐ.ಕೆ. ಮಂಜುನಾಥ್ ಅವರ ಸುಪುತ್ರನಾದ ಸಿದ್ದಾರ್ಥ್, ಎರಡು ವಿಭಿನ್ನ ವಿಭಾಗಗಳಲ್ಲಿ ಸ್ಪರ್ಧಿಸಿ ಎರಡು ಟ್ರೋಫಿ ಹಾಗೂ ಪ್ರಶಸ್ತಿಗಳನ್ನು ಗೆದ್ದು ಪಟ್ಟಣಕ್ಕೆ ಹೆಮ್ಮೆಯನ್ನು ತಂದಿದ್ದಾನೆ.
