ಚನ್ನರಾಯಪಟ್ಟಣ: ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಸ್ಥಾನಗಳಿಗೆ ಇಂದು ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದಯಾನಂದ್ ಶೆಟ್ಟಿಹಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆರ್. ಶ್ರೀನಿವಾಸ್ ಉಳ್ಳಾವಳ್ಳಿ ಆಯ್ಕೆಯಾಗಿದ್ದಾರೆ.
ಖಜಾಂಚಿ, ಎರಡು ಉಪಾಧ್ಯಕ್ಷ ಸ್ಥಾನಗಳು, ಎರಡು ಸಹ ಕಾರ್ಯದರ್ಶಿ ಸ್ಥಾನಗಳು ಹಾಗೂ ನಾಲ್ಕು ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಸ್ಥಾನಗಳಿಗೆ ಮಾತ್ರ ಚುನಾವಣೆ ಪ್ರಕ್ರಿಯೆ ನಡೆಯಿತು.
ಸಂಘವು ಒಟ್ಟು 19 ಸದಸ್ಯರ ಬಲ ಹೊಂದಿದ್ದು, ಅಧ್ಯಕ್ಷ ಸ್ಥಾನಕ್ಕೆ ದಯಾನಂದ್ ಶೆಟ್ಟಿಹಳ್ಳಿ ಮತ್ತು ಶಾಮ್ ಸುಂದರ್, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆರ್. ಶ್ರೀನಿವಾಸ್ ಉಳ್ಳಾವಳ್ಳಿ ಹಾಗೂ ಲೋಹಿತ್ ಅವರು ನಾಮಪತ್ರ ಸಲ್ಲಿಸಿದ್ದರು. ನಡೆದ ಮತದಾನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ದಯಾನಂದ್ ಶೆಟ್ಟಿಹಳ್ಳಿ 10 ಮತಗಳನ್ನು ಪಡೆದು ಜಯಶೀಲರಾದರು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆರ್. ಶ್ರೀನಿವಾಸ್ ಉಳ್ಳಾವಳ್ಳಿ 11 ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ಉಪಾಧ್ಯಕ್ಷರಾಗಿ ನಂದನ್ ಪುಟ್ಟಣ್ಣ ಹಾಗೂ ಕೆ.ಪಿ. ಪುಟ್ಟರಾಜು, ಸಹ ಕಾರ್ಯದರ್ಶಿಗಳಾಗಿ ಜೈ ಕುಮಾರ್ ಮತ್ತು ನಾಗೇಂದ್ರ ರಾಯ, ಖಜಾಂಚಿಯಾಗಿ ಎ.ಎಲ್. ನಾಗೇಶ್ ಹಾಗೂ ನಿರ್ದೇಶಕರಾಗಿ ಎ.ಎಂ. ಜಯರಾಮ್, ನಟೇಶ್. ಎ, ಪಾಂಡುರಂಗ ಮತ್ತು ವೆಂಕಟಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾದ ದಯಾನಂದ್ ಶೆಟ್ಟಿಹಳ್ಳಿ ಮತ್ತು ಆರ್. ಶ್ರೀನಿವಾಸ್ ಉಳ್ಳಾವಳ್ಳಿ ಸೇರಿದಂತೆ ಎಲ್ಲಾ ನೂತನ ಪದಾಧಿಕಾರಿಗಳನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು.
ಚುನಾವಣಾಧಿಕಾರಿಗಳಾಗಿ ಹಿರೀಸಾವೆ ಪ್ರತಾಪ್ ಮತ್ತು ಕೃಷ್ಣ ಹಿಬ್ಬೀಡು ಅವರು ಕರ್ತವ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಸಿದ್ದರಾಜ್, ಸದಸ್ಯರಾದ ಮಂಜುನಾಥ್ ಹಂಚಿಹಳ್ಳಿ, ಪ್ರದೀಪ್, ಗೋವಿಂದ, ಗೋವಿಂದರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
– ಮಂಜುನಾಥ್ ಐ ಕೆ
