ಚನ್ನರಾಯಪಟ್ಟಣ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು, ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯರಿಗೆ ಅಭಿನಂದನಾ ಸಮಾರಂಭವನ್ನು ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಯಿತು.

ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಾಜ್ಯಾಧ್ಯಕ್ಷರಾದ ತಗಡೂರು ಶಿವಾನಂದ್, ತಮ್ಮದೇ ತಾಲೂಕಿನಲ್ಲಿ ಸನ್ಮಾನ ಸ್ವೀಕರಿಸಿರುವುದು ಅವಿಸ್ಮರಣೀಯ ಕ್ಷಣವಾಗಿದೆ ಎಂದು ಹೇಳಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಪರವಾಗಿ ಸದಾ ಸಹಕಾರ ನೀಡುತ್ತಿರುವ ಹ್ಯಾಟ್ರಿಕ್ ಶಾಸಕ ಸಿಎನ್ ಬಾಲಕೃಷ್ಣ ಅವರ ನೆರವನ್ನು ಪತ್ರಕರ್ತರು ಎಂದಿಗೂ ಮರೆಯುವುದಿಲ್ಲ ಎಂದರು. ಪತ್ರಕರ್ತರ ಸ್ವಂತ ಕಟ್ಟಡ ಹಾಗೂ ಕ್ಷೇಮಾಭಿವೃದ್ಧಿಗಾಗಿ ಹಲವು ಮೂಲಗಳಿಂದ ಹಣ ಕ್ರೂಡೀಕರಿಸಿ ಸಹಾಯ ಮಾಡಿರುವ ಶಾಸಕರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ಜೊತೆಗೆ ಮುಂದಿನ ದಿನಗಳಲ್ಲಿ ತಾಲೂಕು ಪತ್ರಕರ್ತರಿಗೆ ನಿವೇಶನ ಒದಗಿಸುವಂತೆ ಮನವಿ ಮಾಡಿದರು.


ರಾಜ್ಯ ಉಪಾಧ್ಯಕ್ಷರಾದ ಎಚ್.ಬಿ. ಮದನ್ ಗೌಡ ಮಾತನಾಡಿ, ರಾಜ್ಯ ಹಾಗೂ ಜಿಲ್ಲಾ ಸಮಿತಿಯ ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಿರುವ ಸ್ಥಳೀಯ ಶಾಸಕ ಸಿಎನ್ ಬಾಲಕೃಷ್ಣ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಶ್ರವಣಬೆಳಗೋಳ ವಿಧಾನಸಭಾ ಕ್ಷೇತ್ರದ ಶಾಸಕರ ಸಹಕಾರದಿಂದ ತಾಲೂಕು ಪತ್ರಕರ್ತರು ಸ್ವಂತ ಮನೆ ಹಾಗೂ ನಿವೇಶನ ಪಡೆಯಲು ನಿರಂತರವಾಗಿ ಶಾಸಕರ ಸಂಪರ್ಕದಲ್ಲಿರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧ್ಯಕ್ಷರಾದ ಜಿ.ಆರ್. ಕೆಂಚೇಗೌಡ ಮಾತನಾಡಿ, ಪತ್ರಕರ್ತರ ಹೆಸರಿನಲ್ಲಿ ಅಧಿಕಾರಿಗಳನ್ನು ಬ್ಲಾಕ್ಮೇಲ್ ಮಾಡುವವರನ್ನು ಸಂಘದಿಂದ ಹೊರ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಆರ್ಟಿಐ ಅರ್ಜಿಗಳ ಹೆಸರಿನಲ್ಲಿ ಅಧಿಕಾರಿಗಳನ್ನು ಹಣಕ್ಕಾಗಿ ಪೀಡಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು. ಚನ್ನರಾಯಪಟ್ಟಣ ತಾಲೂಕಿನಲ್ಲಿ ಬ್ಲಾಕ್ಮೇಲ್ ಮಾಡುವ ಪತ್ರಕರ್ತರಿಗೆ ಅಧಿಕಾರಿಗಳು ಹೆದರಬೇಕಾದ ಅಗತ್ಯವಿಲ್ಲ, ಇಂತಹವರ ವಿರುದ್ಧ ಸಂಘಕ್ಕೆ ದೂರು ನೀಡುವಂತೆ ಕರೆ ನೀಡಿದರು.

ಶಾಸಕ ಸಿಎನ್ ಬಾಲಕೃಷ್ಣ ಮಾತನಾಡಿ, ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗಿನಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗುವವರೆಗೂ ಪತ್ರಕರ್ತರ ಜೊತೆಗೆ ನಿಂತಿದ್ದೇನೆ ಎಂದು ಹೇಳಿದರು. ಪತ್ರಕರ್ತರ ಸಂಕಷ್ಟದ ಸಮಯದಲ್ಲೂ ಸದಾ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿದರು. ಪತ್ರಕರ್ತರ ನಿವೇಶನಕ್ಕಾಗಿ ತಿಮ್ಮತ್ತು ಹಣವನ್ನು ಪಾವತಿಸಿ ನಿವೇಶನ ಒದಗಿಸುವಲ್ಲಿ ಯಶಸ್ವಿಯಾಗಿರುವುದಾಗಿ ತಿಳಿಸಿದರು. ಪತ್ರಕರ್ತರ ಭವನ ನಿರ್ಮಾಣಕ್ಕೂ ಆರ್ಥಿಕ ಸಹಾಯ ಮಾಡಿರುವುದಾಗಿ ಹೇಳಿದ ಅವರು, ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗಾಗಿ 25 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ಕ್ರೂಡೀಕರಿಸಿ ಸಂಘದ ಖಾತೆಗೆ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಅತೀ ಶೀಘ್ರದಲ್ಲಿ ಸ್ವಂತ ಮನೆ ಇಲ್ಲದ ಪತ್ರಕರ್ತರಿಗೆ ಸೂಕ್ತ ಪ್ರದೇಶದಲ್ಲಿ ನಿವೇಶನ ನೀಡುವುದಾಗಿ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಾಸಕ ಸಿಎನ್ ಬಾಲಕೃಷ್ಣ, ತಾಲೂಕು ದಂಡಾಧಿಕಾರಿ ಶಂಕರಪ್ಪ, ಡಿವೈಎಸ್ಪಿ ಕುಮಾರ್, ಬಿಇಒ ದೀಪ, ರಾಜ್ಯಾಧ್ಯಕ್ಷ ತಗಡೂರು ಶಿವಾನಂದ್, ರಾಜ್ಯ ಉಪಾಧ್ಯಕ್ಷ ಎಚ್.ಬಿ. ಮದನ್ ಗೌಡ, ಜಿಲ್ಲಾಧ್ಯಕ್ಷ ಜಿ.ಆರ್. ಕೆಂಚೇಗೌಡ, ಮಾಜಿ ಅಧ್ಯಕ್ಷರಾದ ಉದಯ್ ಕುಮಾರ್, ರವಿ ನಾಕಲಗೋಡು, ಬಾಳುಗೋಪಾಲ್, ಬಿ.ಸಿ. ಚನ್ನೇಗೌಡ, ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ, ಕಸಾಪ ಜಿಲ್ಲಾಧ್ಯಕ್ಷ ಮಲ್ಲೇಶ್ ಗೌಡ, ತಾಲೂಕು ಕಸಾಪ ಅಧ್ಯಕ್ಷ ಲೋಕೇಶ್, ವೈದ್ಯರಾದ ಡಾ. ಮಹೇಶ್, ಡಾ. ಯುವರಾಜ್, ಡಾ. ನಾಗೇಶ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಎ. ನಟೇಶ್, ಹಾಗೂ ಪತ್ರಕರ್ತರಾದ ಜಯರಾಮ್, ಪಾಂಡುರಂಗ, ಶಾಮ್ ಸುಂದರ್, ಚಂದ್ರು, ಪುಟ್ಟರಾಜು, ದಯಾನಂದ, ನಂದನ್ ಪುಟ್ಟಣ್ಣ, ನಾಗೇಂದ್ರರಾಯ, ಜಯಕುಮಾರ್, ಸಿ.ವಿ. ಲೋಹಿತ್, ಆರ್ ಶ್ರೀನಿವಾಸ್, ಪ್ರದೀಪ್, ಐ.ಕೆ. ಮಂಜುನಾಥ್, ಜಿ4 ಗೋವಿಂದ, ಎಚ್.ಎಸ್. ಮಂಜುನಾಥ್, ಗೋವಿಂದರಾಜು ಸೇರಿದಂತೆ ಅನೇಕರು ಹಾಜರಿದ್ದರು.
– ಮಂಜುನಾಥ್ ಐ. ಕೆ

[…] ಇದನ್ನು ಓದು: ಚನ್ನರಾಯಪಟ್ಟಣ: ತಾಲೂಕು ಕಾರ್ಯನಿರತ ಪತ್ರಕ… […]