ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೂಳ ಹೋಬಳಿಯ ಸುಂಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ನಿರ್ದೇಶಕರಿಂದ ಶಾಸಕರಾದ ಸಿ ಎನ್ ಬಾಲಕೃಷ್ಣರವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಿಎನ್ ಬಾಲಕೃಷ್ಣರವರು ನಮ್ಮ ತಾಲೂಕಿನಲ್ಲಿಯೇ ಅತಿ ದೊಡ್ಡ ಸೊಸೈಟಿ ಸುಂಡಹಳ್ಳಿ ಹಾಗಿದ್ದು, 2000 ಮಂದಿ ಸೇರುದಾರರನ್ನು ಹೊಂದಿದೆ, ಇಂತಹ ಸೊಸೈಟಿಯಲ್ಲಿ 12 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿರುವುದು ತುಂಬಾ ಸಂತೋಷದ ವಿಚಾರ ಎಂದರು.
ಮೂರು ಪಕ್ಷಗಳ ಮುಖಂಡರುಗಳ ಒಮ್ಮತದ ಮೇರೆಗೆ ಜೆಡಿಎಸ್ ಪಕ್ಷಕ್ಕೆ ಒಂಬತ್ತು ಸ್ಥಾನಗಳು, ಕಾಂಗ್ರೆಸ್ ಪಕ್ಷಕ್ಕೆ 2 ಸ್ಥಾನಗಳು, ಬಿಜೆಪಿ ಪಕ್ಷಕ್ಕೆ ಒಂದು ಸ್ಥಾನವನ್ನು ಬಿಟ್ಟು ಕೊಡಲಾಗಿದೆ, ಎಲ್ಲಾ ಪಕ್ಷಗಳ ಹೊಂದಾಣಿಕೆಯಿಂದ ಈ ಸೊಸೈಟಿಯ ಅಭಿವೃದ್ಧಿಗೆ ಶ್ರಮಿಸಬೇಕೆಂದು ನೂತನ ನಿರ್ದೇಶಕರಿಗೆ ಸಲಹೆ ನೀಡಿದರು.

ಹಿರಿಯ ಸಹಕಾರಿಗಳಾದ ಪರಮ ಕೃಷ್ಣೇಗೌಡರ ನೇತೃತ್ವದಲ್ಲಿ ಈ ಸೊಸೈಟಿಯು ಮಾದರಿ ಸೊಸೈಟಿಯಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು. ಹಿರಿಯ ಸಹಕಾರಿಗಳಾದ ಕೃಷ್ಣೇಗೌಡ ಮಾತನಾಡಿ ಸುಂಡಹಳ್ಳಿ ಸೊಸೈಟಿಯ ವ್ಯಾಪ್ತಿಯ ಎಲ್ಲಾ ಮುಖಂಡರ ಸಲಹೆ ಸಹಕಾರ ಪಡೆದು ಸಂಘದ ಏಳಿಗೆಗೆ ಶ್ರಮಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕರಾದ ಸಿ ಎನ್ ಪುಟ್ಟಸ್ವಾಮಿಗೌಡ, ಟಿಎಪಿಸಿಎಂಎಸ್ನ ನಿರ್ದೇಶಕರುಗಳಾದ ಪರಮ ಕೃಷ್ಣೇಗೌಡ, ಕುಂಬಾರಹಳ್ಳಿ ರಮೇಶ್, ವೆಂಕಟೇಶ್, ಸುಂಡಹಳ್ಳಿ ಸೊಸೈಟಿಯ ನೂತನ ನಿರ್ದೇಶಕರುಗಳಾದ ಎನ್ ಕೃಷ್ಣೇಗೌಡ, ಬಿ ಕೃಷ್ಣಮೂರ್ತಿ, ಎಚ್ಎಸ್ ದಿವಾಕರ್, ನಂದಕುಮಾರ್, ವಾಸಣ್ಣ, ಶ್ವೇತಾ, ಹುಚ್ಚಮ್ಮ, ಅಣ್ಣಯ್ಯ, ಬಸವರಾಜ್, ಮಂಜುನಾಥ್, ಜೆ ಭುವನೇಶ್ವರಿ, ಹರೀಶ್, ಸುಂಡಹಳ್ಳಿ ಸೊಸೈಟಿಯ ಕಾರ್ಯದರ್ಶಿಯಾದ ನಾಗರಾಜು ಸೇರಿದಂತೆ ಇತರರು ಹಾಜರಿದ್ದರು.
ವರದಿ : ಐ ಕೆ ಮಂಜುನಾಥ್
