Oplus_16908288
ಚನ್ನರಾಯಪಟ್ಟಣ : ತಾಲೂಕಿನ ಹೇಮಾವತಿ ಸಹಕಾರ ಸಕ್ಕರೆಕಾರ್ಖಾನೆಯನ್ನು ಲೀಜಿಗೆ ನೀಡಿದ ಕಾರಣ, ಕಾರ್ಖಾನೆ ರೈತ ಹಾಗೂ ಕಾರ್ಮಿಕರು ಉಳಿಯುವಂತಾಗಿದೆ ಎಂದು, ಶಾಸಕ ಸಿ.ಎನ್ ಬಾಲಕೃಷ್ಣ ಹೇಳಿದ್ದಾರೆ.ತಾಲೂಕಿನ ಶ್ರೀನಿವಾಸಪುರ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಆಭರಣದಲ್ಲಿ ನಡೆದ. 2024 25 ನೇ ಸಾಲಿನ, ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿ ಸಕ್ಕರೆ – ಕಾರ್ಖಾನೆ, 8:30 ಲಕ್ಷ ಟನ್ ಕಬ್ಬು ಅರಿಯುವ ಸಾಮರ್ಥ್ಯವನ್ನು ಹೊಂದಿದೆ. ರೈತರು ಬೆಳೆದ ಕಬ್ಬನ್ನು, ಅರಿಯುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಕಾರ್ಖಾನೆ ರೈತರಿಗೆ ವರದಾನ ವಾಗಿದೆ. ಶೇರುದಾರರು. ಸಕ್ಕರೆಯನ್ನ ನೀಡುವಂತೆ ಒತ್ತಾಯ ಮಾಡುತ್ತಿದ್ದು, ಮೊದಲ ಹಂತದಲ್ಲಿ 30 ಕೆಜಿ ಸಕ್ಕರೆಯನ್ನು ಷೇರುದಾರರಿಗೆ ನೀಡುವ ತೀರ್ಮಾನ ತೆಗೆದುಕೊಳ್ಳಲಾಗುವುದು, ಮೂವತ್ತು ಸಾವಿರದ ಐದು ಮಂದಿ ಶೇರುದಾರರನ್ನ ಹೊಂದಿರುವ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ, ಶೇರುದಾರರ ರೈತರ ಹಿತವನ್ನು ಬಯಸುತ್ತದೆ, ಕಲ್ಯಾಣ – ಮಂಟಪವನ್ನ ನಿರ್ಮಾಣ ಮಾಡುವ ಉದ್ದೇಶ, ಮರಣ ನಿಧಿ – ಘೋಷಣೆ, ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣ, ಸೇರಿದಂತೆ ಹಲವು ವಿಚಾರಗಳ ಬಗ್ಗೆ, ವ್ಯಾಪಕ ಚರ್ಚೆ ಪರ, ವಿರೋಧ ಚರ್ಚೆಗಳು ನಡೆದು, ಈ ಸಭೆ ಒಪ್ಪಿಗೆ ನೀಡಿದೆ ಎಂದರು.
ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ಚಾಮುಂಡೇಶ್ವರಿ – ಶುಗರ್ ಗುತ್ತಿಗೆ ಒಪ್ಪಂದವನ್ನು ನಾಲ್ಕು ವರ್ಷಗಳ ಅವಧಿಗೆ ವಿಸ್ತರಿಸುವ ಬಗ್ಗೆ, ಸಭೆಯಲ್ಲಿ ವ್ಯಾಪಕ ಚರ್ಚೆಗಳು ನಡೆದು ಒಂದು ಹಂತದಲ್ಲಿ ಪರ ವಿರೋಧ ಚರ್ಚೆಗಳು ನಡೆಯಿತು, ಶೇರುದಾರರಾದ ಶಿವರಾಂ, ಸಾಸಲಪುರ ಜಗದೀಶ್ ,ವಡ್ಡರಹಳ್ಳಿ ರಾಜಣ್ಣ, ಗುಳ್ಳಹಳ್ಳಿ ನಂಜುಂಡೇಗೌಡ, ಅಣತಿ ಆನಂದ್, ಗಿರೀಶ್, ರೈತ ಮುಖಂಡರಾದ ಅರಳಾಪುರ ಮಂಜಣ್ಣ, ನಿರ್ದೇಶಕ ರವೀಶ್, ದೇವರಾಜೆ ಗೌಡರು ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿ, ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯ ಆರಂಭದಲ್ಲೇ, ಸಭೆಯ ಆಹ್ವಾನ ಪತ್ರಿಕೆ ಬರೆದಿರುವ ಬಗ್ಗೆ ವ್ಯಾಪಕ ಪ್ರಚಾರವನ್ನು ಮಾಡಿಲ್ಲ ಎಂಬ ದೂರುಗಳ ಬಗ್ಗೆ ಪರ ವಿರೋಧ ಚರ್ಚೆಗಳು, ತಾರಕಕ್ಕೆ ಏರಿತ್ತು.
ರಾಜಕೀಯ ಹಸ್ತಕ್ಷೇಪವಾಗುತ್ತಿದೆ. ರೈತರನ್ನ ಕಾರ್ಖಾನೆಯನ್ನ ಉಳಿಸಬೇಕು, ಕಬ್ಬಿನ ಬೆಳೆಗಾರರ ಬಗ್ಗೆ, ಚಿಂತನೆ ನಡೆಸಿ ಉತ್ತಮ ಬೆಳೆಗಾರರನ್ನ ಗುರ್ತಿಸಬೇಕು ಎಂಬ, ಸಲಹೆಯನ್ನ ಅನಿಲ್ ಮರಗೂರು ಹೇಳಿದರು.
ರೈತರಿಗಾಗಿ ಕಲ್ಯಾಣ ಮಂಟಪದ ನಿರ್ಮಾಣ ಸೇರಿದಂತೆ ಹಲವಾರು ವಿಚಾರಗಳು, ಮಹಾಸಭೆಯಲ್ಲಿ ಚರ್ಚೆಗೊಂಡಿತು.
ಸಭೆಯ ಅಧ್ಯಕ್ಷತೆಯನ್ನು, ಕಾರ್ಖಾನೆಯ ಅಧ್ಯಕ್ಷ ಸಿ.ಎನ್ ವೆಂಕಟೇಶ್ ವಹಿಸಿದ್ದರು.
ಹೇಮಾವತಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ನಾರಾಯಣಗೌಡ, ಮಂಜುನಾಥ್, ತೇಜಸ್ವಿ ಕಿರಣ್, ರವೀಶ್, ಮುತ್ತಿಗೆ ರಾಜೇಗೌಡ, ನಾರಾಯಣ್, ಶಿವಣ್ಣ, ಹೊನ್ನಶೆಟ್ಟಿಹಳ್ಳಿ ರವಿ ವ್ಯವಸ್ಥಾಪಕ ನಿರ್ದೇಶಕ ಕಾಂತರಾಜು ಅರಸ್, ಸೇರಿದಂತೆ ಇತರರು ಹಾಜರಿದ್ದರು.
ವರದಿ : ಐ ಕೆ ಮಂಜುನಾಥ್
