ಚನ್ನರಾಯಪಟ್ಟಣ, ಜೂನ್ 23: ಪಟ್ಟಣದ ಗಾಂಧಿ ಸರ್ಕಲ್ ಬಳಿ ಇರುವ ರಾಯರ ರಂಗಮಂದಿರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ವಿಶೇಷ ಅಲಂಕಾರ, ಅಭಿಷೇಕ ಹಾಗೂ ಮಹಾಮಂಗಳಾರತಿ ನಡೆಯುವ ಹಿನ್ನೆಲೆಯಲ್ಲಿ, ಸಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಶಿಷ್ಟ ನೃತ್ಯ ಸಮರ್ಪಣೆ ಪ್ರಸ್ತುತವಾಯಿತು.
ಡಾ. ಸ್ವಾತಿ ಪಿ. ಭಾರದ್ವಾಜ್ ಅವರ ಶಿಷ್ಯೆಯಾಗಿರುವ ಹಿತನ್ಯ ಅವರು ತಮ್ಮ 10ನೇ ವರ್ಷದ ಹುಟ್ಟುಹಬ್ಬವನ್ನು ಭಕ್ತಿಯಿಂದ ಭರತ ನೃತ್ಯದ ಮೂಲಕ ಆಚರಿಸಿದರು. ಶ್ರೀ ರಾಘವೇಂದ್ರ ಸ್ವಾಮಿಗಳ ಕುರಿತ ಕೃತಿಗಳಿಗೆ 30 ನಿಮಿಷಗಳ ಕಾಲ ನಿರಂತರವಾಗಿ ಭರತನಾಟ್ಯ ಪ್ರದರ್ಶನ ನೀಡಿ ರಾಯರಿಗೆ ನೃತ್ಯ ಸಮರ್ಪಿಸಿದರು.
ಗ್ರಾಮೀಣ ಭಾಗದ ಪ್ರತಿಭಾವಂತ ಕಲಾವಿದೆ ಹಿತನ್ಯ ಅವರ ನೃತ್ಯಕ್ಕೆ ಭಕ್ತರು ಕಣ್ಣು ತುಂಬಿ ಕಣ್ಣೀರು ಹಾಕುವಂತ ಸ್ವರೂಪವಿತ್ತು. ಈ ಸಂದರ್ಭ ಹಿತನ್ಯಗೆ “ಶ್ರೀ ರಾಘವೇಂದ್ರ ಪುರಸ್ಕಾರ” ನೀಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಂತ್ಯದಲ್ಲಿ ಮಹಾಮಂಗಳಾರತಿ ನೆರವೇರಿಸಲಾಯಿತ್ತಾದರೂ, ಪ್ರಸಾದ ವಿನಿಯೋಗದೊಂದಿಗೆ ಸಂಭ್ರಮವನ್ನು ಸಾರ್ಥಕಗೊಳಿಸಲಾಯಿತು. ಪೀಠಾಧಿಪತಿಗಳ ಆಶೀರ್ವಾದ ಈ ಶಿಷ್ಯೆಗೆ ಹಿನ್ನೆಲೆ ನೀಡಿದ್ದು, ಭವಿಷ್ಯದಲ್ಲಿ ಇವರು ಭರತನಾಟ್ಯ ಕ್ಷೇತ್ರದಲ್ಲಿ ಬೆಳಗುವ ಪ್ರತಿಭೆಯೆಂದು ಅಭಿಮಾನಿಗಳು ಆಶಿಸಿದರು.
- ಮಂಜುನಾಥ್ ಐ.ಕೆ
