ಚನ್ನರಾಯಪಟ್ಟಣ: ದುಬೈನಲ್ಲಿ ಒಕ್ಕಲಿಗರ ಸಂಘದ ಸಂಕ್ರಾಂತಿ ಸಡಗರ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿ ಜಯಂತಿ ಆಚರಣೆ ಮಾಡಲಾಯಿತು.
ದುಬೈನಲ್ಲಿ ವಾಸಿಸುತ್ತಿರುವ ಅನಿವಾಸಿ ಕನ್ನಡಿಗರ ಒಕ್ಕೂಟವಾದ ದುಬೈ ಒಕ್ಕಲಿಗರ ಸಂಘವು ಇತ್ತೀಚೆಗೆ ಯುಎಇ ರಾಜಧಾನಿಯಲ್ಲಿ ಅತ್ಯಂತ ವೈಭವದಿಂದ ಸಂಕ್ರಾಂತಿ ಸಡಗರ ಮತ್ತು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಜಯಂತಿಯನ್ನು ಆಚರಿಸಿತು. ವಿದೇಶಿ ಮಣ್ಣಿನಲ್ಲಿ ಕನ್ನಡದ ಸಂಸ್ಕೃತಿ ಮತ್ತು ಒಕ್ಕಲಿಗ ಸಮಾಜದ ಬಾಂಧವ್ಯವನ್ನು ಎತ್ತಿ ಹಿಡಿಯುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಶ್ವವಿಖ್ಯಾತ ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ಮಾನ್ಯ ಡಾ. ಬು ಅಬ್ದುಲ್ಲಾ ಅವರು ಆಗಮಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೌಹಾರ್ದತೆ ಮತ್ತು ಸಾಂಸ್ಕೃತಿಕ ವಿನಿಮಯದಲ್ಲಿ ಇಂತಹ ಸಂಘಟನೆಗಳ ಪಾತ್ರ ದೊಡ್ಡದು ಎಂದು ಶ್ಲಾಘಿಸಿದರು.

ವಿಶ್ವ ಒಕ್ಕಲಿಗರ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮದ ಯಶಸ್ಸಿನ ಹಿಂದೆ ಸಂಘದ ಪದಾಧಿಕಾರಿಗಳ ಶ್ರಮ ಎದ್ದುಕಾಣುತ್ತಿತ್ತು. ಈ ಸಂಭ್ರಮದಲ್ಲಿ
ಅಧ್ಯಕ್ಷರಾದ ಆಲೂರು ಯತೀಶ್ ಗೌಡ, ಉಪಾಧ್ಯಕ್ಷರಾದ ಗ್ಯಾರಹಳ್ಳಿ ಸತೀಶ್ ಚನ್ನರಾಯಪಟ್ಟಣ, ಬೋರ್ಡ್ ಆಫ್ ಡೈರೆಕ್ಟರ್ಸ್ ಗಳಾದ ವೆಂಕಟೇಶ್, ದೀಪಕ್ ಗೌಡ, ಚನ್ನರಾಯಪಟ್ಟಣ ಗೋಕುಲ್ ಗೌಡ, ಪ್ರದೀಪ್ ಗೌಡ, ಅಕ್ಷಯ್ ಗೌಡ ಹಾಗೂ ನಾರಾಯಣಸ್ವಾಮಿ, ಚೇತನ್ ಹಾಜರಿದ್ದು ಈ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು. ನಂತರ ನಡೆದ ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿ ಹಿರಿಯರು, ಕಿರಿಯರು ಎನ್ನದೆ ಎಲ್ಲರೂ ಒಕ್ಕಲಿಗರ ಸಮುದಾಯದ ಬಾಂಧವ್ಯವನ್ನು ಸಂಭ್ರಮಿಸಿದರು. ಅನಿವಾಸಿ ಭಾರತೀಯರು ತಮ್ಮ ಮೂಲ ಸಂಸ್ಕೃತಿಯನ್ನು ಮರೆಯದೆ ಆಚರಿಸುತ್ತಿರುವುದು ಎಲ್ಲರ ಗಮನ ಸೆಳೆಯಿತು.
ನಮ್ಮ ಸಂಸ್ಕೃತಿ, ನಮ್ಮ ಒಕ್ಕಲಿಗರ ಬಂಧುತ್ವವೇ ನಮ್ಮ ಶಕ್ತಿ ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತ್ತು .
– ಮಂಜುನಾಥ್ ಐ ಕೆ
