ಚನ್ನರಾಯಪಟ್ಟಣ: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಭಾನುಮಸ್ತಾಕ್ ನೇತೃತ್ವ ವಹಿಸಬಾರದು ಎಂದು ದೀಕ್ಷಿತ್ ಪ್ರತಿಷ್ಠಾನದ ಅಧ್ಯಕ್ಷ ವಿಶ್ವನಾಥ ದೀಕ್ಷಿತ್ ಆಗ್ರಹಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, “ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳಿಗೆ ಗೌರವ ನೀಡದ ಭಾನುಮಸ್ತಾಕ್ ಅವರಿಂದ ದಸರಾ ಉದ್ಘಾಟನೆ ನಡೆಯುವುದು ಸೂಕ್ತವಲ್ಲ. ಕನ್ನಡ ತಾಯಿ ಭುವನೇಶ್ವರಿ, ಅರಿಶಿಣ ಕುಂಕುಮ, ದೀಪಗಳು ಹಾಗೂ ಕನ್ನಡ ಧ್ವಜಗಳ ಬಗ್ಗೆ ಗೌರವವಿಲ್ಲದ ವ್ಯಕ್ತಿ ಈ ಮಹೋತ್ಸವದ ಉದ್ಘಾಟನೆ ಮಾಡುವುದು ಕಳವಳಕಾರಿ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾನುಮಸ್ತಾಕ್ ಅವರಿಗೆ ಪ್ರತಿಷ್ಠಾನದ ವತಿಯಿಂದ ಅಧಿಕೃತ ಪತ್ರ ಕಳುಹಿಸಿ, ದಸರಾ ಉದ್ಘಾಟನೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳಾದ ತೇಜಸ್ ಗೌಡ, ರಾಘವೇಂದ್ರ, ಭರತ್, ಸೀತಾರಾಮ್ ಸೇರಿದಂತೆ ಇತರರು ಹಾಜರಿದ್ದರು.
ವರದಿ:ಮಂಜುನಾಥ್ ಐ. ಕೆ
ವಿಡಿಯೋ ನೋಡಿ: ಚನ್ನರಾಯಪಟ್ಟಣದಲ್ಲಿ 10 ಕೋಟಿ ರೂ. ವೆಚ್ಚದ ಎಲ್ಟಿ, ಎಚ್ಟಿ ಕೇಬಲ್ ಅಳವಡಿಕೆ ಕಾಮಗಾರಿಗೆ ಚಾಲನೆ
