ಉಸಿರೇ ಉಸಿರು, ಏಕಾಗ್ರತೆಯೇ ಮಂತ್ರ. ಆತಂಕ ಬೇಡ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ. ಪ್ರಾಣಾಯಾಮ ಮತ್ತು ಧ್ಯಾನದ ಮೂಲಕ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ, ಯಶಸ್ಸು ಖಂಡಿತ ನಿಮ್ಮದಾಗುತ್ತದೆ. ಯೋಗಸ್ಥಃ ಕುರು ಕರ್ಮಾಣಿ – ಯೋಗದ ಶಕ್ತಿಯೊಂದಿಗೆ ಉತ್ತಮ ಫಲಿತಾಂಶ ಪಡೆಯಿರಿ!
ವಿದ್ಯಾರ್ಥಿಗಳಿಗೆ ಕೆಲವು ಯೋಗ ಸಲಹೆಗಳು:
ಪರೀಕ್ಷೆಗೆ ಮುನ್ನ ೫ ನಿಮಿಷ ಭ್ರಮರಿ ಪ್ರಾಣಾಯಾಮ ಮಾಡಿ. ದಿನಕ್ಕೆ ೧೦ ನಿಮಿಷ ಸೂರ್ಯ ನಮಸ್ಕಾರ ಮಾಡಿ, ಇದು ಶಕ್ತಿ ಮತ್ತು ದೈಹಿಕ ಸಮತೋಲನವನ್ನು ಹೆಚ್ಚಿಸುತ್ತದೆ. ಹಾಕಿನಿ ಮುದ್ರೆ ಮೆದುಳಿನ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಅತ್ಯಂತ ಪ್ರಬಲವಾದ ಮುದ್ರೆಯಾಗಿದೆ. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಇದನ್ನು ಮಾಡುವುದರಿಂದ ವಿಷಯಗಳನ್ನು ನೆನಪಿಸಿಕೊಳ್ಳಲು ಮತ್ತು ಶಾಂತವಾಗಿರಲು ಸಹಾಯವಾಗುತ್ತದೆ. ಮರೆತುಹೋದ ವಿಷಯಗಳನ್ನು ತಕ್ಷಣ ನೆನಪಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಮನಸ್ಸು ಅತ್ತಿತ್ತ ಅಲೆಯದಂತೆ ತಡೆದು ಪರೀಕ್ಷೆಯ ಮೇಲೆ ಗಮನ ಹರಿಸಲು ಸಹಕಾರಿ ಆಗಿದೆ. ಪರೀಕ್ಷೆಯ ಆತಂಕ ಮತ್ತು ಮೆದುಳಿನ ಆಯಾಸವನ್ನು ಕಡಿಮೆ ಮಾಡುತ್ತದೆ. ಎಡ ಮತ್ತು ಬಲ ಮೆದುಳಿನ ಭಾಗಗಳ ನಡುವೆ ಸಮತೋಲನ ತರುತ್ತದೆ, ಇದರಿಂದ ತಾರ್ಕಿಕವಾಗಿ ಆಲೋಚಿಸಲು ಸುಲಭವಾಗುತ್ತದೆ. ಪರೀಕ್ಷಾ ಭಯವನ್ನು ಕಡಿಮೆ ಮಾಡಲು ನಾಡಿಶೋಧನ ಪ್ರಾಣಾಯಾಮ ಮಾಡಿ. ಏಕಾಗ್ರತೆ ಮತ್ತು ಶಾಂತ ಮನಸ್ಸು ನಿಮ್ಮ ಪರೀಕ್ಷೆಯ ಸಮಯದಲ್ಲಿ ನಿಮ್ಮ ಜೊತೆಗಿರಲಿ. ಭಯವಿಲ್ಲದೆ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ.
“ಧ್ಯಾನವು ಮನಸ್ಸಿಗೆ ಹೇಗೆ ಶಕ್ತಿ ನೀಡುತ್ತದೆಯೋ, ಹಾಗೆಯೇ ನಿಮ್ಮ ಪರಿಶ್ರಮವು ನಿಮಗೆ ಯಶಸ್ಸನ್ನು ತಂದುಕೊಡಲಿ. ಒತ್ತಡಕ್ಕೆ ಒಳಗಾಗದೆ, ಪ್ರಶಾಂತವಾಗಿ ಪರೀಕ್ಷೆಯನ್ನು ಎದುರಿಸಿ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿ.”ಯೋಗವು ಹೇಗೆ ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸುತ್ತದೆಯೋ, ಹಾಗೆಯೇ ನೀವು ಪರೀಕ್ಷೆ ಮತ್ತು ವಿಶ್ರಾಂತಿಯನ್ನು ಸಮತೋಲನಗೊಳಿಸಿ. ನಿಮ್ಮ ಜ್ಞಾನವು ಹಾಳೆಯ ಮೇಲೆ ಸ್ಪಷ್ಟವಾಗಿ ಮೂಡಿಬರಲಿ.
ಭಗವಂತನ ದಯೆಯು ನಿಮಗೆ ದಾರಿ ದೀಪವಾಗಲಿ. ಪರೀಕ್ಷೆಯ ಈ ಸಮಯದಲ್ಲಿ ನಿಮ್ಮ ಬುದ್ಧಿಶಕ್ತಿ ಪ್ರಕಾಶಮಾನವಾಗಿ ಬೆಳಗಲಿ. ಆತ್ಮವಿಶ್ವಾಸವೇ ನಿಮ್ಮ ಅತಿದೊಡ್ಡ ಆಯುಧವಾಗಲಿ.
“ಆತ್ಮವಿಶ್ವಾಸವೇ ಯಶಸ್ಸಿನ ರಹಸ್ಯ –ನಿಮ್ಮ ಮೇಲೆ ನಂಬಿಕೆ ಇರಲಿ.” ಪರೀಕ್ಷೆಯಲ್ಲಿ ನಿಮಗೆ ಉತ್ತಮ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.
ಯೋಗ ಶಿಕ್ಷಕಿ ರೇಖಾರಾಣಿ
ಹೋಲಿಸ್ಟಿಕ್ ಯೋಗಮುದ್ರ ಕೇಂದ್ರ
ಚನ್ನರಾಯಪಟ್ಟಣ
